ನವದೆಹಲಿ, ಡಿ 01(SM): ನಿರಂತರವಾಗಿ ಏರಿಕೆ ಕಂಡಿದ್ದ ಗೃಹ ಬಳಕೆಯ ಅಡುಗೆ ಅನಿಲಗಳ ದರ ಇದೀಗ ಕಡಿಮೆಯಾಗಿದ್ದು, ಗೃಹಣಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ನವಂಬರ್ ೩೦ರ ಶುಕ್ರವಾರದಂದು ಸಿಲಿಂಡರ್ ದರ ಇಳಿಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳ ಏರಿಳಿತ, ಡಾಲರ್ ಎದುರು ರುಪಾಯಿ ಮೌಲ್ಯ ಚೇತರಿಕೆ ಕಾರಣ ನೀಡಲಾಗಿದೆ. ಸಬ್ಸಿಡಿಯುಳ್ಳ ಅಡುಗೆ ಅನಿಲ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 6.52ರೂ ನಷ್ಟು ಇಳಿಕೆಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 133 ರೂಪಾಯಿ ತಗ್ಗಿದೆ.
ಜೂನ್ ತಿಂಗಳಿಂದ ಸತತವಾಗಿ ಏರಿಕೆ ಕಂಡಿದ್ದ ಅಡುಗೆ ಅನಿಲ ದರದಲ್ಲಿ ಈಗ ಇಳಿಕೆ ಕಂಡು ಬಂದಿದೆ. ನವೆಂಬರ್ 30ರ ಮಧ್ಯರಾತ್ರಿಯಿಂದ ನೂತನ ದರಗಳು ಜಾರಿಗೆ ಬರಲಿವೆ. ದೆಹಲಿಯಲ್ಲಿ ಸಬ್ಸಿಡಿಯುಳ್ಳ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ 500.90ರೂಪಾಯಿಗಳಾಗಿದೆ. ಈ ಮುಂಚೆ 507.42ರು ನಷ್ಟಿತ್ತು. ಸಬ್ಸಿಡಿರಹಿತ ಅಡುಗೆ ಅನಿಲ ಬೆಲೆಯಲ್ಲಿ 133ರು ತಗ್ಗಿಸಲಾಗಿದ್ದು, 14.2ಕೆಜಿ ತೂಗುವ ಸಿಲಿಂಡರ್ ಬೆಲೆ 809.50ರು ಆಗಲಿದೆ.