ಮಂಗಳೂರು, ಡಿ01(AB): ನಗರದ ನಂತೂರಿನಲ್ಲಿ ನಡೆದ ಜನನುಡಿ ಸಮಾವೇಶಕ್ಕೆ ಪ್ರಕಾಶ್ ರೈ ಆಗಮಿಸಿದ್ದು, ನಟ ರೈ ವಿರುದ್ದ ಮಂಗಳೂರಿನ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಜನನುಡಿ ಕಾರ್ಯಕ್ರಮ ನಡೆಯುತ್ತಿದ್ದ ಶಾಂತಿ ಕಿರಣ ಸಭಾಂಗಣದ ಆವರಣಕ್ಕೆ ಹಿಂದೂ ಜಾಗರಣ ವೇದಿಕೆಯ ಶರತ್ ಪದವಿನಂಗಡಿ, ಸುಭಾಷ್, ಪ್ರವೀಣ್ ಮತ್ತು ಸುನಿಲ್ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಡಿಸಿಪಿ ಹನುಮಂತರಾಯ ಹೇಳಿದ್ದಾರೆ.