ನವದೆಹಲಿ, ಡಿ 01(SM): ಕರ್ನಾಟಕ ರಾಜ್ಯ ಸೇರಿದಂತೆ 7 ರಾಜ್ಯಗಳಿಗೆ ಸುಪ್ರೀಂಕೋರ್ಟ್ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡದ ಸರ್ಕಾರಗಳಿಗೆ ಸುಪ್ರೀಂ ದಂಡ ವಿಧಿಸಿದೆ.
ಜಸ್ಟೀಸ್ ಮದನ್ ಬಿ ಲೋಕುರ್ ಅವರಿದ್ದ ಪೀಠ ಕರ್ನಾಟಕ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ, ಗೋವಾ ರಾಜ್ಯಗಳಿಗೆ ದಂಡ ವಿಧಿಸಿದೆ.
ಕರ್ನಾಟಕದಲ್ಲಿ ಶೇ.50, ರಾಜಸ್ಥಾನದಲ್ಲಿ ಶೇ. 50 ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ, ಗೋವಾದಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇವೆ. ಅಸ್ಸಾಂನಲ್ಲಿ ಶೇ.40, ಮಹಾರಾಷ್ಟ್ರದಲ್ಲಿ ಶೇ 50, ಒಡಿಶಾದಲ್ಲಿ ಶೇ 33ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 80ರಷ್ಟು ಹುದ್ದೆಗಳು ಖಾಲಿ ಇವೆ.
ಈಗಾಗಲೇ ಖಾಲಿ ಇರುವ ಹುದ್ದೆಗಳ ಕುರಿತು ಸರ್ಕಾರಗಳಿಗೆ ಮಾಹಿತಿ ಸಲ್ಲಿಸಲು ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾಲ್ಕು ವಾರದೊಳಗಾಗಿ ಸುಪ್ರೀಂಕೋರ್ಟ್ ಲೀಗಲ್ ಸರ್ವೀಸಸ್ ಕಮಿಟಿಗೆ 50 ಸಾವಿರ ರೂಪಾಯಿ ಸಂದಾಯ ಮಾಡುವಂತೆ ಕೋರ್ಟ್ ಆದೇಶಿಸಿದೆ.