ಕೋಟ,ಡಿ 02 (MSP): ಟೋಲ್ನಲ್ಲಿ ಸ್ಥಳೀಯರಿಗೆ 10 ರಿಂದ 20 ಕೀ.ಮೀ ವರೆಗೆ ರಿಯಾಯಿತಿ ನೀಡಬೇಕೆನ್ನುವುದು ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಹಾಗೂ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ. ಇವರ ಮನವಿಯನ್ನು ನಾನು ಕೇಂದ್ರ ಸರಕಾರಕ್ಕೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ರಾಜ್ಯದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಬೆಂಗಳೂರಿನಲ್ಲಿ ಈ ಕುರಿತು ಕರೆದ ಸಭೆಯಲ್ಲಿ ಬಹಳ ಉದಾಸೀನವಾಗಿ ಮಾತನಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶನಿವಾರ ಕೋಟದಲ್ಲಿ ಸುದ್ದಿಗಾರರು ಸಾಸ್ತಾನ ನವಯುಗ ಕಂಪೆನಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹದ ವಿರುದ್ಧ ಹೆದ್ದಾರಿ ಜಾಗೃತಿ ಸಮಿತಿಯ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಈ ಯೋಜನೆ ಕೇಂದ್ರ ಸರಕಾರದ ಯೋಜನೆಯಾದರೂ ಜಾರಿಗೆ ತರುವ ಕೆಲಸ ರಾಜ್ಯ ಸರಕಾರದ್ದು.ಇಲ್ಲಿನ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಸರಕಾರಕ್ಕೆ ನಮಗೆ ಯಾವುದೇ ರೀತಿಯ ಸಹಕಾರವನ್ನು ನೀಡುತ್ತಿಲ್ಲ. ಉಡುಪಿ ಜಿಲ್ಲಾಧಿಕಾರಿ ಹತ್ತಿರ ಸಹ ಈ ಕುರಿತು ಚರ್ಚಿಸಲಾಗಿದ್ದು, ಮುಂದಿನ ಹೋರಾಟದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಜತೆಗೆ ಸಾರ್ವಜನಿಕರೊಂದಿಗೆ ನಾನೂ ಹೋರಾಟಕ್ಕಿಳಿಯುತ್ತೇನೆ. ಈಗಾಗಲೇ ಕೇಂದ್ರಕ್ಕೆ ಮನವರಿಕೆ ಮಾಡುವ ಕೆಲಸ ಮಾಡಲಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಕರ್ನಾಟಕದ ಹಾಸನದಲ್ಲಿದ್ದು, ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದರೂ, ಟೋಲ್ನ ವಿಚಾರದಲ್ಲಿ ಅವರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಲಾಗಿದೆ ಎಂದರು.
ಸಮಸ್ಯೆ ಬಗೆ ಹರಿಯದಿದ್ದಲ್ಲಿ ಡಿ.೭ನೇ ತಾರೀಕು ಒಂದು ತೀರ್ಮಾನಕ್ಕೆ ಬಂದು ಸ್ಥಳೀಯ ಶಾಸಕರನ್ನು ಸೇರಿಸಿಕೊಂಡು ಹೋರಾಟಕ್ಕಿಳಿಯುತ್ತೇನೆ. ಗುತ್ತಿಗೆ ಪಡೆದ ನವಯುಗ ಕಂಪೆನಿ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಿರುವುದಲ್ಲದೇ, ಕುಂದಾಪುರದ ಪ್ಲೈಓವರ್, ಬಸ್ರೂರು ಮೂರ್ಕೈ ಅಂಡರ್ಪಾಸ್, ಪಡುಬಿದ್ರಿ ಮೊದಲಾದ ಕಡೆ ಇನ್ನು ಕಾಮಗಾರಿ ಬಾಕಿ ಇದ್ದು, ಈ ಬಾರಿ ಕೊಟ್ಟ ಅವಧಿಯ ಒಳಗೆ ಕಾಮಗಾರಿ ಪೂರೈಸದೆ ಇದ್ದಲ್ಲಿ ಈ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಹಗುರ ಮಾತಿಗೆ ಪ್ರತಿಕ್ರಿಯೆ ಇಲ್ಲ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನ ಬಗ್ಗೆ ಹಗುರವಾಗಿ ಮಾತನಾಡಿದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಂತಹ ಹಗುರವಾಗಿ ಮಾತನಾಡುವ ವ್ಯಕ್ತಿಗಳ ಮಾತಿಗೆ ನಾನು ಪ್ರತಿಕ್ರಿಯೆ ಕೊಡಲಾರೆ. ಯಡಿಯೂರಪ್ಪ ಎಲ್ಲಿ ಹೋಗಿದ್ದಾರೆ ಎಂದು ಅವರ ಇಂಟೆಲಿಜೆನ್ಸಿ ಇದೆ. ಕೇರಳದಲ್ಲಿ ನಮ್ಮ ಸರಕಾರ ಇಲ್ಲ. ಅವರದ್ದೆ ಮಹಾಘಟಬಂಧ ಸರಕಾರವಿದೆ. ಅವರ ಹತ್ತಿರನೇ ಕೇಳಲಿ. ಯಡಿಯೂರಪ್ಪ ಎಲ್ಲಿದ್ದಾರೆ,ಯಾವಾಗ ಬಂದ್ರು,ಯಾವ ಪ್ಲೈಟ್ಲ್ಲಿ ಬಂದ್ರು ಎಂದು ಕೇಳಿ ನೋಡಲಿ. ಈ ರೀತಿ ಹಗುರವಾಗಿ ಮಾತನಾಡುವ ದಾರಿ ತಪ್ಪಿಸುವವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕಾಂಚನ್, ಗೀತಾಂಜಲಿ ಸುವರ್ಣ,ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷಕಾಡೂರು ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.