ಕುಂದಾಪುರ,ಡಿ 02 (MSP):ಕೆರಾಡಿ ಬೀಡಿನ ಮನೆ ಹಾಗೂ ಕೆರಾಡಿ ಗ್ರಾಮಸ್ಥರ ಸಹಕಾರದೂಂದಿಗೆ ಬೀಡಿನ ಮನೆ ಕಂಬಳವು ಬಿಡಿನ ಮನೆ ಕಂಬಳ ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು.ಬಿಡಿನ ಮನೆ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಈ ಬಾರಿಯು ಕೂಡ ಬಹಳ ಅದ್ದೂರಿಯಾಗಿ ಮತ್ತು ಸಾಂಪ್ರದಾಯಿಕವಾಗಿ ಕಂಬಳವನ್ನು ಆಚರಿಸಲಾಯಿತು. ತಾಲೂಕಿನ ನಾನಾ ಕಡೆಗಳಿಂದ ಕೋಣಗಳು ಆಗಮಿಸಿದ್ದು ಆಗಮಿಸಿ ಕೋಣ ಹಾಗೂ ಯಜಮಾನರು, ತಂಡದವರನ್ನು ವಾದ್ಯಗೋಷ್ಠಿ ಹಾಗೂ ಸಾಪ್ರದಾಯಿಕವಾಗಿ ವಿಳ್ಯ ಕೊಡುವುದರ ಮೂಲಕ ಸ್ವಾಗತಿಸಲಾಯಿತು.
ಕಂಬಳ ಮಹೋತ್ಸವದಲ್ಲಿ ಹಲಗೆ ವಿಭಾಗ, ಹಗ್ಗ ವಿಭಾಗಗಳಲ್ಲಿ ಸ್ಪರ್ಧೆ ನಡೆದರೆ, ಸ್ಥಳಿಯ ಯುವಕರಿಗಾಗಿ ಕೆಸರು ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.ಈ ಬಾರಿ ಕೆರಾಡಿ ಕಂಬಳಕ್ಕೆ ತಾರಾ ಮೆರುಗು ಬಂದಿತ್ತು. ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಭ್ ಶೆಟ್ಟಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಮಾದ್ಯಮದವರೊಂದಿಗೆ ಮಾತನಾಡಿದ ರಿಷಭ್ ಶೆಟ್ಟಿ, ರೈತರಿಗಾಗಿ ಹಾಗೂ ರೈತರಿಗೋಸ್ಕರ ನಡೆಸುವ ಸಾಂಪ್ರದಾಯಿಕ ಹಾಗೂ ಮನೋರಂಜನಾ ಕ್ರೀಡೆ ಇದ್ದರೆ ಅದು ಕಂಬಳ ಮಾತ್ರ. ಈಗ 20 ವರ್ಷದ ಬಳಿಕ ಬಿಡಿನ ಮನೆ ಕಂಬಳ ನೋಡಲು ಬಂದಿದ್ದೇನೆ. ಕಂಬಳಕ್ಕೆ ಪರ ಮತ್ತು ವಿರೋಧ ಎರಡು ಇದೆ ನನ್ನ ಪ್ರಕಾರ ಇನ್ನು ಮುಂದೆಯೂ ಸಹ ಇದೆ ರೀತಿ ಸಾಂಪ್ರದಾಯಿಕವಾಗಿ ನಡೆಯಲಿ ಎಂದು ಆಶಿಸುತ್ತೇನೆ ಎಂದರು. ಬಿಡಿನ ಮನೆ ಕುಟುಂಬದಲ್ಲಿ ಒಬ್ಬರಾದ ಅಶ್ವಥ್ ಮಾತನಾಡಿ, ಬಿಡಿನಮನೆ ಕಂಬಳಕ್ಕೆ ನೂರಾರು ವರ್ಷಗಳ ತನ್ನದೆ ಆದ ಇತಿಹಾಸವಿದೆ. ಬಿಡಿನ ಮನೆ ಹಾಗೂ ಕೆರಾಡಿಯ ಜನರ ಸಹಕಾರದಿಂದ ನಾವು ಅದನ್ನು ಮುಂದುವರಿಸಲಾಗುತ್ತಿದೆ ಎಂದರು.
ಕಂಬಳಕ್ಕೆ ವಿವಿಧ ಭಾಗಗಳಿಂದ ಸುಮಾರು 30 ಕ್ಕೂ ಅಧಿಕ ಕೋಣ ಗಳು ಪಾಲ್ಗೊಂಡಿದ್ದವು. ಸ್ಪರ್ದೆಯಲ್ಲಿ ಗೆದ್ದ ಕೋಣಗಳಿನೆ ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು. ಸ್ಥಳಿಯ ಯುವಕರಿಗೆ ಕೂಡ ಕೆಸರುಗದ್ದೆ ಕ್ರೀಡೆಗಳನ್ನು ಏರ್ಪಡಿಸಿದ್ದು ವಿಜೇತರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಯಿತು.