ಮಂಗಳೂರು, ಡಿ 02(SM): ಹಿಂದೂ ಹುಡುಗಿಯ ಅತ್ಯಾಚಾರ ನಡೆದರೆ ಆರ್.ಎಸ್.ಎಸ್ ಗೆ ಖುಷಿ ಎಂದು ಬಜರಂಗ ದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಜನನುಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮನಿಂದ ಅತ್ಯಾಚಾರವಾದರೆ ಸಂಘಪರಿವಾರ ಅದರಲ್ಲೇ ಬೆಳೆ ಬೇಯಿಸುತ್ತದೆ. ಆರ್.ಎಸ್.ಎಸ್. ಸಂಘಟನೆ ದಲಿತರ, ಹಿಂದೂ ಸಮಾಜದ ಪರವಾಗಿಲ್ಲ. ಶೋಷಣೆ ವಿರುದ್ಧ ಧ್ವನಿ ಎತ್ತುವುದು ನಿಜವಾದ ಹಿಂದುತ್ವವಾಗಿದೆ. ಆರ್.ಎಸ್.ಎಸ್. ಬಜರಂಗದಳ, ವಿಹೆಚ್ ಪಿ ಹಿಂದೂ ಸಮಾಜ ಅಲ್ಲ.
ಹಿಂದೂ ಸಮಾಜ ಬಹಳ ದೊಡ್ಡದಿದೆ ಎಂದು ಆರ್.ಎಸ್.ಎಸ್. ವಿರುದ್ಧ ಮಹೇಂದ್ರ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.