ಉಡುಪಿ ಅ16:ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಾದ ಜನಾರ್ಧನ ತೋನ್ಸೆಯವರನ್ನು ಉಡುಪಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯು ಅದೇಶ ಹೊರಡಿಸಿದೆ.
ಜನಾರ್ಧನ ತೋನ್ಸೆಯವರು ಹಾಲಿ ಅಧ್ಯಕ್ಷ ಗೋಪಾಲ ಪೂಜಾರಿಯವರಿಂದ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಜನಾರ್ಧನರು ಉಡುಪಿ ಜಿಲ್ಲಾ ಪಂಚಾಯತಿನ ಕಲ್ಯಾಣ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ಈ ಮೊದಲು ಅವರು ನಗರಾಭಿವ್ರದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮುಂದಿನ ವಿಧಾನ ಸಭೆ ಚುನಾವಣೆಯನ್ನು ಮನಗಂಡು ಕಾಂಗ್ರೆಸ್ ಪಕ್ಷವು ಹಲವು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದೆ.