ಮಂಗಳೂರು ಅ16: ಸಚಿವ ರೋಶನ್ ಬೇಗ್ ರವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಡಿದ್ದ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಸ್ಥಳೀಯ ಬಿಜೆಪಿ ನಾಯಕರು ಇಲ್ಲಿನ ಪಿವಿಎಸ್ ಸರ್ಕಲ್ ಮುಂಬಾಗದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ರೋಶನ್ ಬೇಗ್ ದೇಶದ ಪ್ರಧಾನಿ ಅವಮಾನ ಮಾಡುವುದರೊಂದಿಗೆ ಕರ್ನಾಟಕ ಮಾನವನ್ನು ಹರಾಜಿಗಿಟ್ಟಿದ್ದಾರೆ. ಬೇಗ್ ರವರ ಮಾತುಗಳಿಂದಾಗಿ ರಾಜ್ಯದ ಜನರು ಮುಜುಗರದಿಂದ ತಲೆತಗ್ಗಿಸುವಂತಾಗಿದೆ. ಆದುದರಿಂದ ಬೇಗ್ ರವರನ್ನು ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ತಕ್ಷಣ ಅಮಾನತುಗೊಳಿಸಬೇಕೆಂದು ಧರಣಿ ಕುಳಿತ ಪ್ರತಿಭಟನಾಕಾರರು ಆಘ್ರಹಿಸಿದರು.
ಪ್ರತಿಭಟನೆಯಿಂದ ರಸ್ತೆ ಸಂಚಾರಕ್ಕೆ ತಡೆಯುಂಟಾಗುವುದನ್ನು ಮನಗಂಡ ಪೋಲಿಸರು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರೂಪಾ ಡಿ ಬಂಗೇರ,ಮೋನಪ್ಪ ಭಂಡಾರಿ, ಯೋಗಿಶ್ ಭಟ್,ಬ್ರಿಜೇಶ್ ಚೌಟ,ಕಿಶೋರ್ ರೈ ಬಂಧನಕ್ಕೊಳಗಾದ ನಾಯಕರಲ್ಲಿ ಪ್ರಮುಖರಾಗಿದ್ದಾರೆ.