ಬೆಂಗಳೂರು,ಡಿ 03 (MSP): ಲಿಂಗ ಪರಿವರ್ತನೆ ಮಾಡಿಸಿಕೊಂಡು ಸುದ್ದಿಯಾಗಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ’ಮಗ’ಳು, ಇದೀಗ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಬೇಕಾಬಿಟ್ಟಿ ಕಾರನ್ನು ಚಲಾಯಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ, ಗೃಹ ಸಚಿವ, ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಇದ್ದೊಬ್ಬನೇ ಮಗ, 2018ರ ಆರಂಭದಲ್ಲಿ ವಿದೇಶದಲ್ಲಿದ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಹೆಣ್ಣಾಗಿ ಪರಿವರ್ತನೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಕಾರ್ , ಬೈಕ್ ರೇಸ್ ಬಗ್ಗೆ ಅತಿಯಾಗಿ ಮೋಹ ಬೆಳೆಸಿಕೊಂಡಿದ್ದ ಶಶಾಂಕ್ ಪರಮೇಶ್ವರ್ ಶನಾ ಆಗಿ ಬದಲಾದ ಬಳಿಕವೂ ತಮ್ಮ ಈ ಕ್ರೇಜ್ ಮುಂದುವರಿದಿದೆ. ವಿದೇಶದಿಂದ ಕೆಲ ತಿಂಗಳ ಹಿಂದೆಯಷ್ಟೇ ಪರಮೇಶ್ವರ್ ಅವರ ‘ಮಗ’ಳು ಬೆಂಗಳೂರಿಗೆ ಹಿಂತಿರುಗಿದ್ದು, ಐಷರಾಮಿ ಕಾರೊಂದನ್ನು ಜನನಿಬಿಡ ರಸ್ತೆಯಲ್ಲೇ ಶನಾ ಡ್ರ್ಯಾಗ್ ರೇಸ್ ವ್ಹೀಲಿಂಗ್ ಮಾಡಿ ಸುದ್ದಿಯಾಗಿದ್ದಾರೆ.
ಶನಾ ರ್ಯಾಷ್ ಡ್ರೈವ್ ಮಾಡುತ್ತಿರುವುರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೂ ಡಿಸಿಎಂ ಮಗಳ ಈ ವರ್ತನೆಗೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಬೈಕ್ ಸವಾರರು ಶನಾ ಕಾರಿನ ಹಿಂದೆ ಹೋಗುತ್ತಾ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಇದು ಡಾಕ್ಯುಮೆಂಟರಿಗಾಗಿ ತಯಾರಿಸಿದ ವಿಡಿಯೋನಾ ಅಥವಾ ಶನಾ ರ್ಯಾಷ್ ಡ್ರೈವ್ ಮಾಡಿದ್ದಾರೆಯೇ ಎಂದು ಇನ್ನಷ್ಟೇ ತಿಳಿಯಬೇಕಾಗಿದೆ.
ಡ್ರೈವ್ ಲೈಕ್ ಶನಾ ಎನ್ನುವ ಪೇಜ್ ಹೊಂದಿರುವ ಇವರು ದುಬಾರಿ ಕಾರು, ಬೈಕ್ ಗಳ ವಿಡಿಯೋ , ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.