ಬೆಳ್ತಂಗಡಿ,ಡಿ 05 (MSP): ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಆದಿವಾಸಿ ಸಮುದಾಯ ವಾಸಿಸುವ ಪ್ರದೇಶಕ್ಕೆ ಸೂಕ್ತ ರೀತಿಯಲ್ಲಿ ರಸ್ತೆ ದುರಸ್ತಿ ಮಾಡಲು ಕಾನೂನಿನ ಅಡ್ಡಿ ಹೇಳುವ ವನ್ಯಜೀವಿ ಅರಣ್ಯ ಇಲಾಖೆ ಮಾತ್ರ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ಜೆಸಿಬಿ ಬಳಸಿ ರಸ್ತೆ ದುರಸ್ತಿ ಕಾರ್ಯ ನಡೆಸಿದ ಘಟನೆ ತಾಲೂಕಿನ ಸವಣಾಲು ಗ್ರಾಮದಲ್ಲಿ ನಡೆದಿದೆ.
ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆಳಗಿನ ಆರಾಬೆ , ಮೇಲಿನ ಆರಾಬೆ ಪ್ರದೇಶದಲ್ಲಿ ವನ್ಯಜೀವಿ ಅರಣ್ಯ ಇಲಾಖಾಧಿಕಾರಿಗಳು ಜೆಸಿಬಿ ಬಳಸಿ ಕಾನೂನು ಬಾಹಿರವಾಗಿರಸ್ತೆ ದುರಸ್ತಿ ಕಾರ್ಯ ನಡೆಸಿದ್ದಾರೆ. ರಸ್ತೆಯಒಂದು ಬದಿಯಲ್ಲಿಚರಂಡಿಕೂಡ ನಿರ್ಮಾಣ ಮಾಡಿದ್ದಾರೆ.
ಶತಮಾನಗಳಿಂದ ದಟ್ಟಕಾನನದ ನಡುವೆ ಆದಿವಾಸಿ ಮಲೆಕುಡಿಯ ಸಮುದಾಯ ವಾಸಿಸುತ್ತಿದೆ. ಜನವಸತಿಇರುವ ಪ್ರದೇಶದರಸ್ತೆ ದುರಸ್ತಿಗೆ ಮುಂದಾದರೆ ಕಾನೂನಿನ ನೆಪ ಹೇಳಿ ಅಡ್ಡಿ ,ಆತಂಕ ಪಡಿಸುವ ವನ್ಯಜೀವಿ ಅರಣ್ಯ ಇಲಾಖೆ ಇದೀಗ ತಾವೇರಸ್ತೆ ದುರಸ್ತಿ ಮಾಡುವ ಮೂಲಕ ಅರಣ್ಯ ಕಾನೂನು ದುರ್ಬಳಕೆ ಮಾಡಿಕೊಂಡಂತಾಗಿದೆ.
ಇತ್ತೀಚೆಗೆ ಬೆಳ್ತಂಗಡಿ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ನಡೆದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದುಕೊರತೆಗಳ ಸಭೆಯಲ್ಲಿ ರಸ್ತೆ ದುರಸ್ತಿ ಮಾಡಲು ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತು. ಆಗ ಮಾತನಾಡಿದ ಬೆಳ್ತಂಗಡಿ ವನ್ಯಜೀವಿ ಅರಣ್ಯ ಇಲಾಖೆಯ ಅರಣ್ಯಾಧಿಕಾರಿರವರು ಅರಣ್ಯ ಹಕ್ಕು ಕಾಯ್ದೆಯಡಿ ಪರವಾನಗಿ ಇಲ್ಲದೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಅದೇ ಇಲಾಖಾಧಿಕಾರಿಗಳು ತಮಗೆ ಯಾವುದೇ ಕಾನೂನು ಅನ್ವಯಿಸುವುದಿಲ್ಲ ಎಂಬಂತೆ ಜೆಸಿಬಿ ಬಳಸಿ ರಸ್ತೆ ದುರಸ್ತಿ ಮಾಡುವ ಮೂಲಕ ಸಾಬೀತು ಪಡಿಸಿದ್ದಾರೆ. ಅರಣ್ಯ ಕಾನೂನಿನಲ್ಲಿಎರಡು ವಿಧಗಳಿವೆಯೇ ಎಂದು ಸ್ಥಳೀಯ ಆದಿವಾಸಿಗಳು ಪ್ರಶ್ನಿಸುತ್ತಿದ್ದಾರೆ.
ಈ ಮಧ್ಯೆಕುದುರೆಮುಖರಾಷ್ಟ್ರೀಯಉದ್ಯಾನವನ ವ್ಯಾಪ್ತಿಯಲ್ಲಿ ಬೆಲೆಬಾಳುವ ಮರಗಳನ್ನು ಕಡಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿವೆ. ಅರಣ್ಯ ಲೂಟಿಕೋರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿರಸ್ತೆ ದುರಸ್ತಿ ಮಾಡಲಾಗಿದೆಯೇ ಎಂಬ ಅನುಮಾನ ಸ್ಥಳೀಯ ಆದಿವಾಸಿಗಳದ್ದು. ಮರ ಕಳ್ಳತನಕ್ಕೆ ಸಾಕ್ಷಿ ಹೇಳುತ್ತಿರುವ ಕಡಿದ ಮರದ ಕಾಂಡಗಳು.
ಮಂಗಳವಾರ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಿಯೋಗ ಸ್ಥಳಕ್ಕೆ ಭೇಟಿ ನೀಡಿರಸ್ತೆ ದುರಸ್ತಿಯನ್ನು ವೀಕ್ಷಿಸಿತು. ನಿಯೋಗದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕುಅಧ್ಯಕ್ಷ ವಸಂತ ನಡ , ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ಎಲ್ , ಸಾಮಾಜಿಕ ಕಾರ್ಯಕರ್ತರಾದರಾಜೇಶ್ ಭಟ್ ಸವಣಾಲು , ಕಿರಣ್ಕುಮಾರ್ ನಡ್ತಿಕಲ್ಲು ಆದಿವಾಸಿ ಮುಖಂಡರಾದ ಲೋಕೇಶ್ ನಡ , ಮೋಹನ್ ನಡ , ಚೇತನ್ಅನ್ಯಾಡಿಪಲ್ಕೆ , ನಾಗೇಶ್ಅನ್ಯಾಡಿಪಲ್ಕೆ ಉಪಸ್ಥಿತರಿದ್ದರು.