ಉಡುಪಿ ಅ17: ಸೋಮಾವಾರ ಬ್ರಹ್ಮಾವರದಲ್ಲಿ ನಡೆದ ಪರಿವರ್ತನಾ ಸಮಾವೇಶಕ್ಕೆಂದು ಆಗಮಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಐಬಿ ಅಥಿತಿಗ್ರಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಧಿಡೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಮಧ್ವರಾಜ್ ಭೇಟಿಯ ಸಂದರ್ಭ ಬಿಜೆಪಿ ನಾಯಕರು ವಿಶ್ರಾಂತಿ ಕೊಠಡಿಯಲ್ಲಿ ಚಹಾ ಸೇವಿಸುತ್ತಿದ್ದರು. ಬಿಜೆಪಿ ಪಕ್ಷದ ಔಪಾಚಾರಿಕ ಸಭೆ ನಡೆಯುತ್ತಿಲ್ಲ ಎಂದು ಸೇರಿದವರಿಂದ ಖಚಿತಪಡಿಸಿಕೊಂಡ ಪ್ರಮೋದ್ ಬಿಜೆಪಿ ನಾಯಕರಿದ್ದ ಕೊಠಡಿಗೆ ನುಗ್ಗಿಯೇ ಬಿಟ್ಟರು. ಅನಂತ ಕುಮಾರ್ ರೊಂದಿಗಿದ್ದ ನಾಯಕರಾದ ಆರ್.ಆಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಹಾಗೂ ಇನ್ನಿತರ ನಾಯಕರು ಹಸನ್ಮುಖರಾಗಿ ಮಧ್ವರಾಜ್ ರನ್ನು ಸ್ವಾಗತಿಸಿದರು. ರಾಜಕೀಯೇತರ ಕುಶಲೋಪಚರಿಯ ನಂತರ ಹೊರಬಂದ ಮಧ್ವರಾಜ್ ದಾಯ್ಜಿವರ್ಲ್ಡ್ ವಾಹಿನಿಯೊಂದಿಗೆ ಮಾತಾನಾಡಿ " ಇದೊಂದು ಸೌಹಾರ್ದಯುತವಾದ ಭೇಟಿ. ಅನಂತ ಕುಮಾರ ಅಮ್ಮ ಮನೋರಮಾ ಮಧ್ವರಾಜ್ ಕುರಿತು ವಿಚಾರಿಸಿದರು. ವಿಶ್ರಾಂತಿಗಾಗಿ ನಾನು ಇನ್ಪೆಕ್ಟರ್ಸ್ ಬಂಗಲೆಗೆ ಹೋಗಿದ್ದೆ. ಅಲ್ಲಿ ತಲುಪಿದಾಗ ಬಿಜೆಪಿ ನಾಯಕರು ಅಲ್ಲಿರುವ ಬಗ್ಗೆ ಗಮನಕ್ಕೆ ಬಂತು. ಶಿಶ್ಟಾಚಾರ ಪ್ರಕಾರ ಅಥಿತಿಗಳಾಗಿ ಬಂದ ಅವರನ್ನು ಭೇಟಿ ಮಾಡಬೇಕೆನ್ನಿಸಿತು. ಈ ಭೇಟಿಗೆ ಯವುದೇ ರಾಜಕೀಯ ಉದ್ದೇಶವಿಲ್ಲ."ಎಂದು ಹೇಳಿದರು.
ಈ ಮೊದಲು ಕೆಲ ಮಾಧ್ಯಮಗಳಲ್ಲಿ ಪ್ರಮೋಧ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಎಂದು ವಾರ್ತೆಯಾಗಿತ್ತು. ಆದರೆ ಇದಕ್ಕೆ ಸ್ಪಶ್ಟೀಕರಣ ನೀಡಿದ ಪ್ರಮೋದ್ ವಾರ್ತೆಯನ್ನು ಅಲ್ಲಗೆಳೆದಿದ್ದರು.