ಬೆಂಗಳೂರು, ಡಿ 06 (MSP): ರಾಜ್ಯದ ರೈತ ಸಮುದಾಯದಲ್ಲಿ ಆತ್ಮ ವಿಶ್ವಾಸ ತುಂಬಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮವೊಂದರಲ್ಲಿ ಆಗಸ್ಟ್ 11ರಂದು ತಾವೇ ಖುದ್ದಾಗಿ ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ.
ಡಿ.೭ ರ ಶುಕ್ರವಾರ ಸಂಜೆ 4ಗಂಟೆ ಸುಮಾರಿಗೆ ಅದೇ ಜಾಗಕ್ಕೆ ಭೇಟಿ ನೀಡಿ ಭತ್ತ ಕಟಾವು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಅಂದೇ ಸಂಜೆ 5:30ರ ವೇಳೆಗೆ ಇತ್ತೀಚೆಗೆ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದಲ್ಲಿ ಪರಿಹಾರದ ಚೆಕ್ ವಿತರಣೆ ಮಾಡಲಿದ್ದಾರೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಮತ್ತು ಅರಳಕುಪ್ಪೆ ಗ್ರಾಮದ ವ್ಯಾಪ್ತಿಗೆ ಸೇರಿದ ಗದ್ದೆಯಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಆಗಸ್ಟ್ ತಿಂಗಳಲ್ಲಿ ಸಿಎಂ ತಾವೇ ಸ್ವತಃ ರೈತರಾಗಿ ಗದ್ದೆಗಿಳಿದು ನಾಟಿ ಸುಮಾರು ೩ ಗಂಟೆಗಳ ಕಾಲ ನಾಟಿ ಮಾಡಿದ್ದರು. ಬಿಳಿ ಅಂಗಿ, ಪಂಚೆಯೊಂದಿಗೆ ಗದ್ದೆಗಿಳಿದ ಸಿಎಂ, ಪಂಚೆ ಎತ್ತಿ ಕಟ್ಟಿ ಭತ್ತದ ಪೈರು ನಾಟಿ ಮಾಡಿದ್ದರು..ಈ ವೇಳೆ ಕುಮಾರಸ್ವಾಮಿಗೆ ಎಲ್. ಆರ್.ಶಿವರಾಮೇಗೌಡ, ಸಿ.ಎಸ್.ಪುಟ್ಟರಾಜು ಸೇರಿ ಹಲವರು ಸಾಥ್ ನೀಡಿದ್ರು..ಇನ್ನು ಸಿಎಂ ನಾಟಿ ಮಾಡುತ್ತಿರುವ ವೇಳೆ ಉಳುವ ಯೋಗಿಯ ನೋಡಲ್ಲಿ ರೈತ ಗೀತೆ ಮೇಳೈಸಿತ್ತು. ಇದೀಗ ಭತ್ತ ಕೊಯ್ಲಿಗೆ ಸಿದ್ದರಾಗಿದ್ದಾರೆ ಎಂ ಕುಮಾರಸ್ವಾಮಿ.