ನವದೆಹಲಿ, ಡಿ 07 ( MSP): ಯಾಕೋ ನಿಮಗೆ ಅಧಾರ್ ಬೇಡ ಎಣಿಸುತ್ತಿದೆಯೇ, ಹಾಗದ್ರೆ ಕ್ಯಾನ್ಸಲ್ ಮಾಡಿಬಿಡಿ...ಹೀಗೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು ಇಂಥಹ "ಐಚ್ಚಿಕ ಆಧಾರ್" ಪ್ರಸ್ತಾವನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ರೆಡಿಯಾಗುತ್ತಿದೆ. ಇದರ ಗ್ರೀನ್ ಸಿಗ್ನಲ್ ಪಡೆಯಲು ಕೇಂದ್ರ ಕಾನೂನು ಸಚಿವಾಲಯಕ್ಕೂ ಕಳುಹಿಸಲಾಗಿದೆ. ಅಲ್ಲದೇ ಶೀಘ್ರದಲ್ಲೇ ಕೇಂದ್ರ ಸಂಪುಟ ಸಭೆಯ ಮುಂದೆಯೂ ಪ್ರಸ್ತಾಪವಾಗಲಿದೆ. ಒಂದು ವೇಳೆ ಎಲ್ಲಡೆಯಿಂದ ಸಕಾರತ್ಮಕ ಪ್ರಕ್ರಿಯೆ ದೊರೆತರೆ ದೇಶಾದ್ಯಂತ ಜಾರಿಗೆ ಬರಲಿದೆ.
ಐಚ್ಚಿಕ ಆಧಾರ್ ಜಾರಿಗೆ ಬಂದರೆ ನಿಮಗೆ ಆಧಾರ್ ಬೇಡ ಎಂದ್ರೆ ತಮ್ಮ ಕಾರ್ಡ್ ವಾಪಾಸ್ ನೀಡಬಹುದು. ಪ್ರಾಧಿಕಾರ ಪಡೆದಿರುವ ಎಲ್ಲಾ ದಾಖಲೆಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಳ್ಳಬಹುದು. ಹಾಗೆಂದು ಇದು ಎಲ್ಲರಿಗೂ ಅನ್ವಯಿಸಲ್ಲ. ಇದು ಪಾನ್ ಇಲ್ಲದವರಿಗೆ ಮಾತ್ರ ಅನ್ವಯವಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಐಟಿ ಗೆ ಪಾನ್ ಮತ್ತು ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಹೀಗಾಗಿ ರಿಟರ್ನ್ಸ್ ಸಲ್ಲಿಸುತ್ತಿರುವವರು ಮತ್ತು ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಹೊಂದಿರಲೇಬೇಕು.
ಅಲ್ಲದೆ ಈ ಪ್ರಸ್ತಾಪನೆಯಲ್ಲಿ ಆಧಾರ್ ಅಳಿಸುವ ಹಕ್ಕು ೧೮ ವರ್ಷ ತುಂಬಿದ ಎಲ್ಲರಿಗೂ ನೀಡಲಾಗುತ್ತದೆ. ಮತ್ತು ಆರು ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತದೆ.ಈ ಅವಧಿಯಲ್ಲಿ ಮನವಿ ನೀಡಿದ್ರೆ ಮಾತ್ರ ಆಧಾರ್ ದಾಖಲೆ ಅಳಿಸಲಾಗುತ್ತದೆ..ಇಲ್ಲವಾದರೆ ಹಾಗೇಯೆ ಉಳಿದುಬಿಡುತ್ತದೆ.