ಕುಂದಾಪುರ,ಡಿ 07 ( MSP): ಕೆ.ಎ.20 ವಾಹನಗಳಿಗೆ ಟೋಲ್ ವಿನಾಯತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೆದ್ದಾರಿ ಜಾಗೃತ ಸಮಿತಿ ಡಿ.7ರಂದು ಬಂದ್ಗೆ ಕರೆ ನೀಡಿದ್ದು, ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಸುಮಾರು 130 ಸಂಘಟನೆಗಳು ಈ ಬಂದ್ಗೆ ಕರೆ ನೀಡಿವೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾ ಕಾರರು ಸಾಸ್ತಾನ ಟೋಲ್ ಗೇಟ್ ಹತ್ತಿರ ಜಮಾಯಿಸುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಬೃಹತ್ ಪ್ರತಿಭಟನಾ ಸಭೆ ಆರಂಭವಾಗಲಿದೆ.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡಿರುವ ಜಿಲ್ಲಾಡಳಿತ ಹಿಂದೆಂದೂ ಕಾಣದಷ್ಟು ಪೊಲೀಸರನ್ನು ನಿಯೋಜನೆ ಮಾಡಿದೆ. ಬಿಗಿ ಖಾಕಿ ಸರ್ಪಗಾವಲು ಸಾಸ್ತಾನ ಟೋಲ್ ಗೇಟಿನಲ್ಲಿ ನಿಯೋಜಿಸಲಾಗಿದೆ. ಯಾವುದೇ ವಾಹನ ತಡೆಯಲು ಅವಕಾಶ ನೀಡಿಲ್ಲ. ಆದರೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಯಾವುದೇ ಕ್ಷಣದಲ್ಲಿ ಬೇಕಾದರೂ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಂಭವ ಇರುವುದರಿಂದ ಬಿಗಿ ಕಟ್ಟೆಚ್ಚರವನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಒಬ್ಬರು ಹೆಚ್ಚುವರಿ ಎಸ್ಪಿ, ಇಬ್ಬರು ಡಿವೈಎಸ್ಪಿ, 6 ಸರ್ಕಲ್ ಇನ್ಸಪೆಕ್ಟರ್, 12 ಪಿಎಸ್ಐ, 21 ಎ.ಎಸ್.ಐ, 38 ಎಸ್.ಸಿ.ಪಿ.ಸಿ., 71ಎಚ್.ಸಿ, 28 ಡಬ್ಲ್ಯೂಪಿಸಿ, 8 ವ್ಯಾನ, 3 ಕೆ.ಎ.ಎಸ್.ಆರ್.ಪಿ ತುಕಡಿ, ೪ ಬಿ.ಎ.ಆರ್, ಅಂಬ್ಯುಲೆನ್ಸ್, ಅಗ್ನಿಶಾಮಕ ಸಹಿತ ಬಿಗಿ ವ್ಯವಸ್ಥೆಯನ್ನು ರೂಪಿಸಿಕೊಳ್ಳಲಾಗಿದೆ.