ಮಂಗಳೂರು ಅ17: "ಮೇಯರ್ ಅಕ್ರಮ ಧಂದೆ ಹಾಗೂ ಕಾನೂನು ಬಾಹಿರ ಕೇಂದ್ರಗಳಿಗೆ ಧಾಳಿ ನಡೆಸಿ ಅದನ್ನು ಮಟ್ಟಹಾಕುವ ಸಾಹಸಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ ನಿಜವಾಗಿಯೂ ಅಕ್ರಮ ಧಂದೆಯನ್ನು ಮಟ್ಟಹಾಕುವ ಎದೆಗಾರಿಕೆ ಇದ್ದಲ್ಲಿ ನಗರದ ಅಕ್ರಮ ಗೋ ಸಾಗಣಿಕೆಗಾರರನ್ನು ಕೈಯಾರೆ ಹಿಡಿದು ತಮ್ಮ ಸಾಹಸ ತೋರಿಸಲಿ." ಎಂದು ವಿಶ್ವ ಹಿಂದು ಪರಿಷದ್ ಮಂಗಳೂರು ಮೇಯರಿಗೆ ಸವಾಲು ಹಾಕಿದೆ.
ನಗರದ ಕೇಂದ್ರ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಶ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ವಿಶ್ವ ಹಿಂದು ಪರಿಷದ್ ನಾಯಕ ಜಗದೀಶ್ ಶೇಣವ " ಮಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಅಕ್ರಮ ಗೋ ಸಾಗಾಟಗಾರರು ರಾಜಾ ರೋಷವಾಗಿ ತಮ್ಮ ಧಂದೆಯನ್ನು ನಡೆಸುತ್ತಿದ್ದಾರೆ. ಕಾನೂನಿಗೇ ಸವಾಲೆಸೆಯುವಂತಹ ರೀತಿಯಲ್ಲಿ ಇವರು ವಿಂಜ್ರಭಿಸುತ್ತಿದ್ದಾರೆ. ಇದು ಮೇಯರ್ ರವರು ಯಾಕೆ ಗಮನಿಸುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲ. ನಿಜವಾದ ಛಲಗಾರಿಕೆ ಇದ್ದಲ್ಲಿ ಮೇಯರ್ ಇವರನ್ನು ಮಟ್ಟಹಾಕಲಿ .ಆಗ ಜನರು ಮೇಯರ್ ಅಕ್ರಮ ಚಟುವಟಿಗಳಿಗೆ ವಿರುದ್ಧ ಕಾರ್ಯಚರಿಸುವ ವೆಕ್ತಿ ಎಂದು ಒಪ್ಪಿಕೊಳ್ಳುವರು." ಎಂದು ಹೇಳಿದರು
"ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಗೋವುಗಳನ್ನು ಆರಾಧಿಸುವ ಸಂಪ್ರಾದಯ ಭಾರತದಲ್ಲಿದೆ. ಈ ಪ್ರಯುಕ್ತ ವಿಶ್ವ ಹಿಂದು ಪರಿಶದ್ ನಗರದ 120 ಕೇಂದ್ರಗಳಲ್ಲಿ ಗೋ ಪೂಜೆಯನ್ನು ಹಮ್ಮಿಕೊಂಡಿದೆ. ಸಾರ್ವಜಣಿಕ ಹೆಚ್ಚಿನ ಸಂಖ್ಯೆಯಲ್ಲಿ ಈ ಪೂಜೆಗಳಲ್ಲಿ ಭಾಗವಹಿಸಬೇಕು " ಎಂದು ಅವರು ಕರೆಯಿತ್ತರು
ನಾಯಕರಾದ ಭುಜಂಗ ಕುಲಾಲ್, ಗೋಪಾಲ್ ಕುತ್ತಾರ್, ಉಮೇಶ್ ಜಪ್ಪಿನ ಮೊಗರು ಮೊದಲಾದವರು ಉಪಸ್ಥಿತರಿದ್ದರು.