ಬಂಟ್ವಾಳ, ಡಿ 09( MSP): ಸಾಕಷ್ಟು ವಿವಾದ ಗಳಿಂದಲೇ ಸುದ್ದಿಯಾಗಿದ್ದ ಬಂಟ್ವಾಳ ಇಂದಿರಾ ಕ್ಯಾಂಟೀನ್, ಇದೀಗಾ ಉದ್ಘಾಟನಾ ಕಾರ್ಯಕ್ರಮವು ಮತ್ತೆ ಎರಡು ರಾಜಕೀಯ ಪಕ್ಷಗಳ ಸಂಘರ್ಷಕ್ಕೆ ಕಾರಣವಾಯಿತು. ಡಿ.9 ರ ಭಾನುವಾರ ನಡೆದ ಉದ್ಘಾಟನಾ ಕಾರ್ಯಕ್ರಮದ ವೇಳೆ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದು ಹೊಯಿಕೈ ನಡೆದ ಪ್ರಸಂಗ ನಡೆಯಿತು. ಗಲಾಟೆ ನಡೆಯುವ ಸಂಭವವಿರುವ ಕಾರಣದಿಂದ ಪ್ರೋಟೋ ಕಾಲ್ ಪ್ರಕಾರ ಕಾರ್ಯಕ್ರಮ ನಡೆಯಬೇಕು ಎಂದು ಬಂಟ್ವಾಳ ನಗರ ಠಾಣಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರ ಶೇಖರ್ ತಹಶೀಲ್ದಾರ ಅವರಿಗೆ ಪತ್ರಬರೆದಿದ್ದರು.
ಇನ್ನೊಂದೆಡೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಆಗಮಿಸಬಾರದು ಎಂದು ಬಿಜೆಪಿ ಮುಖಂಡರು ತಹಶೀಲ್ದಾರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದು, ಈ ಕಾರಣದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರುಗಳ ಮಧ್ಯೆ ಜಟಾಪಟಿ ನಡೆಯಿತು ಎಂದು ಹೇಳಲಾಗಿದೆ.
ಇಂದು ಬೆಳಿಗ್ಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಕ್ಯಾಂಟೀನ್ ಉದ್ಘಾಟನೆ ನಡೆಸುವ ವೇಳೆ ಇದೇ ಕಾರಣಕ್ಕೆ ಸ್ಥಳೀಯ ಶಾಸಕ ಮತ್ತು ಜಿ.ಪಂ.ಸದಸ್ಯ ರ ನಡುವೆ ಮಾತಿನ ಚಕಮಕಿ ನಡೆದು ನೂಕಾಟದ ಹಂತದವರೆಗೂ ಮುಟ್ಟಿತ್ತು. ಸಚಿವ ಸಂಸದರ ಮಧ್ಯೆ, ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲವೂ ನಡೆದುಹೋಗಿದ್ದು
ಸರಕಾರಿ ಕಾರ್ಯಕ್ರಮ ದಲ್ಲಿ ಗಲಭೆ ಸೃಷ್ಟಿಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜೇಶ್ ನಾಯ್ಕ್ ಕಾರ್ಯಕ್ರಮ ದಿಂದ ಹೊರನಡೆದರು.
ಇದೇ ವೇಳೆ ಎರಡು ಪಕ್ಷದ ಬೆಂಬಲಿಗರು ತಮ್ಮ ವಿರೋಧ ಪಕ್ಷ ನಾಯಕರ ಹೆಸರು ಹೇಳಿ ಧಿಕ್ಕಾರ ಕೂಗಿದರು ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.