ಮಂಗಳೂರು, ಡಿ 10 (MSP): ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾಗಬೇಕು ಎಂಬುವುದು ಎಲ್ಲಾ ಹಿಂದುಗಳ ಕನಸು. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಇದನ್ನು ನಾನು ಹೇಳಿದ್ದು ತಪ್ಪಾ? - ಹೀಗೆ ಕೇಳಿದವರು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ.
ಕಾಂಗ್ರೆಸ್ ಅಧಿನಾಯಕಿ ಸೋನಿಯ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಜೆಪ್ಪುವಿನ ಆಶ್ರಮಕ್ಕೆ ಹಣ್ಣ ಹಂಪಲು ವಿತರಣೆ ಮಾಡಿದ ಅವರು, ನಾನು ಹೇಳಿರುವ ಮಾತಿಗೆ ಈಗಲೂ ಬದ್ದನಾಗಿದ್ದೇನೆ. ನಾನು ಹೀಗೆ ಹೇಳಿದ್ದಕ್ಕೆ ನನ್ನ ವಿರುದ್ದ ಮಾತನಾಡುವವರಿದ್ದಾರೆ. ಕೊಲ್ಲುವುದಾಗಿ ಹೇಳುವವರೂ ಇದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ನಾನು ನೀಡಿದ ಹೇಳಿಕೆಯ ಬಳಿಕ ನನ್ನನ್ನು ಎನ್ ಕೌಂಟರ್ ಮಾಡಿ ಸಾಯಿಸಬೇಕು ಎಂದು ಆಡಿಯೋ ಸಂದೇಶ ನೀಡಿದ ವ್ಯಕ್ತಿ ಗೆ ತೃಪ್ತಿಯಾಗುವುದಿದ್ದರೆ ನನ್ನನ್ನು ಕೊಂದುಬಿಡಲಿ. ಸಾಯುವವರೆಗೆ ನಾನು ಇದನ್ನೇ ಹೇಳುತ್ತೇನೆ. ಶ್ರೀರಾಮ, ಮುಹಮ್ಮದ್ ಪೈಗಂಬರ್, ಯೇಸು ಇವರನ್ನು ದೇವರೆಂದು ನಂಬುವವ ನಾನು. ನನ್ನ ದ್ರ್ಇಷ್ಟಿಯಲ್ಲಿ ಅವರೆಲ್ಲ ದೇವರ ಹಾಗೆ .ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.