ಬೆಳ್ತಂಗಡಿ, ಡಿ10 (MSP): ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್ ಅಳಕೆ ರಸ್ತೆಯಲ್ಲಿ ನ.11 ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕನಕಪುರ ತಾಲೂಕು ಅತ್ತಿಹಳ್ಳಿ ನಿವಾಸಿ ಎಸ್ ಮಂಜೇಶ್ (25) ಪ್ರಕರಣಕ್ಕೆ ಸಂಬಂಧಿಸಿ ಅಲಗೂರು ನಿವಾಸಿ ಉಮೇಶ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ಸಾತನೂರು ಹೋಬಳಿ ಹತ್ತಿಹಳ್ಳಿಯ ಎ.ಪಿ ಸ್ವಾಮಿ ಪುತ್ರ ಎಸ್. ಮಂಜೇಶ್ ಬೆಂಗಳೂರಿನ ವಿವಿ ಪುರಂ ಕಾನೂನು ಮಹಾವಿದ್ಯಾಯಲಯದಲ್ಲಿ ಅಮ್ತಿಮ ವರ್ಷದ ವಿದ್ಯಾರ್ಥಿಯಾಗಿದ್ದ. ನ.8 ರಂದು ಸ್ನೇಹಿತನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದ ಆತ ಬಳಿಕ ನಾಪತ್ತೆಯಾಗಿದ್ದ. ನ.11 ರಂದು ಗುರಿಪಳ್ಳದಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಸುತ್ತಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಐ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯ ಆರೋಪಿಗೆ 7 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.