ನವದೆಹಲಿ,ಡಿ 10 (MSP): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿ, ಪ್ರಥಮ ಬಾರಿಗೆ ದೇಶೀಯವಾಗಿ ‘ಕೃತಕ ಹೃದಯ ಕವಾಟ’ ತಯಾರಿಸಲಾಗಿದೆ. ಅಲ್ಲದೆ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕೃತಕ ಹೃದಯ ಕವಾಟ ತಂತ್ರಜ್ಞಾನಕ್ಕೆ ಜಾಗತಿಕ ವೈದ್ಯಕೀಯ ಉಪಕರಣಗಳ ತಯಾರಕರಾದ ಮೆರಿಲ್ ಲೈಫ್ ಸೈನ್ಸೆಸ್ ಶನಿವಾರ ಚಾಲನೆ ಕೊಟ್ಟಿದೆ.
ವೈದ್ಯಕೀಯವಾಗಿ ಹೆಚ್ಚಿನ ತೊಂದರೆಯನ್ನು ಎದುರಿಸುತ್ತಿರುವ, ಶಸ್ತ್ರಚಿಕಿತ್ಸೆಯನ್ನು ಎದುರಿಸಲು ಶಕ್ತರಾಗಿರದ ರೋಗಿಗಳಿಗೆ ಅಥವಾ ತೆರೆದ ಹೃದಯ ಕವಾಟ ಬದಲಾವಣೆ ಆಪರೇಷನ್ ಗೆ ಒಪ್ಪದ ರೋಗಿಗಳಿಗೆ ಈ ಆವಿಷ್ಕಾರವು ವರದಾನವಾಗಿದೆ. ಓಪನ್ ಹಾರ್ಟ್ ವಾಲ್ವ್ (ಹೃದಯ ಕವಾಟ)ವೂ ’ಮೈ ವಾಲ್’ ಎಂಬ ಹೆಸರಿನಲ್ಲಿ ಕೃತಕ ವಾಲ್ ಳನ್ನು ಮಾರುಕಟ್ಟೆಗೆ ಪರಿಚಯಮಾಡಲಾಗಿದೆ ಎಂದು ಮೆರಿಲ್ ಲೈಫ್ ಸೈನ್ಸೆಸ್ ಕಂಪನಿಯ ಉಪಾಧ್ಯಕ್ಷ ಸಂಜೀವ್ ಭಟ್ ಹೇಳಿದ್ದಾರೆ.
ಈ ಕೃತಕ ಹೃದಯ ಕವಾಟಗಳನ್ನು ವೈದ್ಯರು ರೋಗಿಯ ತೊಡೆಯಲ್ಲಿರುವ ನರಗಳ ಮೂಲಕ ರೋಗಗ್ರಸ್ತ ಕವಾಟದ ಜಾಗದಲ್ಲಿ ಅಳವಡಿಸಬಹುದಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಅಪಾಯದ ಮತ್ಟ ಕನಿಷ್ಟವಾಗಿದೆ ಎಂದು ಇದನ್ನು ತಯಾರಿಸುವ ಸಂಸ್ಥೆ ಮೆರಿಲ್ ಅಭಿಪ್ರಾಯಪಟ್ಟಿದೆ.