ಉತ್ತರ ಪ್ರದೇಶ, ಡಿ 10 (MSP) : 80 ವರ್ಷ ವಯಸ್ಸಿನ ತನ್ನ ವೃದ್ದ ತಾಯಿಯನ್ನು ಆಕೆಯ ಪುತ್ರನೇ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋದ ಕಾರಣ ಆಕೆ ಹಸಿವು ತಾಳಲಾರದೆ ಸಾವನಪ್ಪಿದ್ದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ವರದಿಯಾಗಿದೆ.
ಮೃತ ವೃದ್ಧೆ ಯ ಪುತ್ರ ಸಲೀಲ್ ಚೌಧರಿ ರೈಲ್ವೇ ನೌಕರ. ಆತನಿಗೆ ರೈಲ್ವೆ ಇಲಾಖೆಯಿಂದಲೇ ಮನೆ ದೊರಕಿತ್ತು. ಆದರೆ ಈತ 80ರ ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿ ಹೋಗಿದ್ದ. ಮನೆಯಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿದ ನೆರೆಕರೆಯವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ವೃದ್ಧೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಆಕೆ ಹಸಿವಿನಿಂದಲೇ ಸಾವನಪ್ಪಿರಬಹುದೆಂದು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಯುತ್ತಿದೆ.
ಈ ಬಗ್ಗೆ ಶಹಜಹನ್ ಪುರದ ರೈಲ್ವೆ ಸ್ಟೇಷನ್ ಮಾಸ್ಟರ್ ಓಂ ಶಿವ ಅವಸ್ಥಿ ಮಾತನಾಡಿ, ಚೌದರಿಯೂ ಶಹಜಹನ್ ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಮಾಹಿತಿ ನೀಡದೆ ರಜೆ ಹಾಕಿದಕ್ಕಾಗಿ ಎರಡು ಬಾರಿ ಇಲಾಖೆ ಆತನಿಗೆ ಅಮಾನತು ಶಿಕ್ಷೆ ನೀಡಿತ್ತು. ಆದರೂ ಈತ ಕಳೆದ ಎರಡು ತಿಂಗಳಿಂದ ಕೆಲಸಕ್ಕೆ ಹಾಜರಾಗಿಲ್ಲ ಎಂದಿದ್ದಾರೆ
ಇನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ದಿನೇಶ್ ತ್ರಿಪಾಠಿ ಈ ಬಗ್ಗೆ ಮಾಹಿತಿ ನೀಡಿ ಚೌಧರಿಯೂ ಲಕ್ನೋ ಅಲಂಭಾಗ್ ಪರಿಸರದವನು. ಈತ ರೈಲ್ವೆ ಇಲಾಖೆಯಿಂದ ಶಹಜಹನ್ ಪುರಕ್ಕೆ 2005 ರಲ್ಲಿ ನಿಯೋಜನೆಗೊಂಡಿದ್ದನು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾನೆ.