ನವದೆಹಲಿ, ಡಿ 10 (MSP): ಎನ್ಡಿಎ ಮಿತ್ರಕೂಟ ಪಕ್ಷವಾದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಜೊತೆ ಭಿನ್ನಾಭಿಪ್ರಾಯಗಳಿದ್ದು ಇದೇ ಹಿನ್ನಲೆಯಲ್ಲಿ ಮಾನವ ಸಂಪನ್ಮೂಲ ರಾಜ್ಯ ಸಚಿವರಾಗಿದ್ದ ಉಪೇಂದ್ರ ಕುಶ್ವಾಹ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ನೇತೃತ್ವದ ಎನ್ಡಿಎ ಮಿತ್ರಕೂಟದಿಂದ ಹೊರನಡೆದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಆರ್ಎಲ್ಎಸ್ಪಿಗೆ ಬಿಜೆಪಿ ಹಾಗೂ ಜೆಡಿಯು ಕೇವಲ 2 ಸೀಟು ಹಂಚಿಕೆ ಮಾಡಿದ್ದವು. ಇದರಿಂದ ಅಸಮಾಧಾನ ಭುಗಿಲೆದ್ದು ಉಪೇಂದ್ರ ಕುಶ್ವಾಹ ಅವರು ಬಿಜೆಪಿ ವಿರುದ್ಧ ಹಲವಾರು ಬಾರಿ ಹೇಳಿಕೆಗಳನ್ನ ನೀಡುತ್ತಾ ಬಂದಿದ್ದರು. ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಮಾತುಕತೆ ನಡೆಸಿದ ನಂತರ ಕುಶ್ವಾಹ ಈ ನಿರ್ಧಾರ ಪ್ರಕಟಿಸಿದ್ದಾರೆ.
ಕುಶ್ವಾಹ ರಾಜೀನಾಮೆಯಿಂದ ಆರ್ಜೆಡಿಯ ತೇಜಸ್ವಿ ಯಾದವ್ಗೆ ಬಲ ಬಂದಂತಾಗಿದೆ ಎಂದು ಬಿಂಬಿಸಲಾಗುತ್ತಿದೆ.