ನವದೆಹಲಿ, ಡಿ 10(SM): ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆ ಪ್ರಕರಣವನ್ನು ಕಾಂಗ್ರೆಸ್ ಇದೀಗ ರಾಜಕೀಯ ದಾಳವಾಗಿ ಬಳಸಿಕೊಂಡಿದೆ. ಬಿಜೆಪಿ ವಿರುದ್ಧದ ರಾಜಕೀಯ ಹೋರಾಟಕ್ಕೆ ವರವಾಗಿ ಪರಿಣಮಿಸಿದೆ.
ಊರ್ಜಿತ್ ಆರ್ ಬಿಐ ಸಂಸ್ಥೆಯನ್ನು ರಕ್ಷಿಸುತ್ತಿದ್ದ ಕಾರಣಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್ ರನ್ನು ಉಳಿಸಿಕೊಳ್ಳಲು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಆರ್ ಬಿಐ ನಿಧಿಯನ್ನು ಕಿತ್ತುಕೊಳ್ಳಲು ಮುಂದಾಗಿದ್ದಿರಿ. ಅದರ ವಿರುದ್ಧ ಸೆಟೆದು ನಿಂತ ಎಲ್ಲ ಜೀವನ ಮತ್ತು ಸಂಸ್ಥೆಗಳ ಜನರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ ನೇಮಿಸಿದ ಜನರೆಲ್ಲರೂ ರಾಜೀನಾಮೆ ನೀಡುತ್ತಿದ್ದಾರೆ. ಮೊದಲು ಸಿಇಎ ಹುದ್ದೆಯಿಂದ ಅರವಿಂದ್ ಸುಬ್ರಮಣಿಯನ್ ನಿರ್ಗಮಿಸಿದರು. ಈಗ ಊರ್ಜಿತ್ ಪಟೇಲ್ ಎಂದು ಆರೋಪಿಸಿದ್ದಾರೆ. ಮೋದಿ ತಾವೊಬ್ಬ ಮಹಾನ್ ಆರ್ಥಿಕ ತಜ್ಞ, ತಮಗೆ ಅವರಾರೂ ಬೇಡ ಎಂದು ಯೋಚಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆರೋಪಿಸಿದ್ದಾರೆ.