ಮಂಗಳೂರು, ಡಿ 10(SM): ದತ್ತ ಮಾಲ ಜಯಂತಿಯಂದು ದತ್ತಪಾದುಕೆಯ ದರ್ಶನಕ್ಕಾಗಿ ದತ್ತಮಾಲಾ ಯಾತ್ರೆಯನ್ನು ಡಿಸೆಂಬರ್ 12ರಿಂದ 22ರ ತನಕ ಆಯೋಜಿಸಲಾಗಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 12ರಂದು ಮಾಲಾಧಾರಣೆಗೆ ಚಾಲನೆ ದೊರೆಯಲಿದೆ. ಡಿಸೆಂಬರ್ 20ರಂದು ಪೀಠದಲ್ಲಿ ಅನಸೂಯದೇವಿಯ ಪೂಜೆ ಜರಗಲಿದೆ. ಡಿಸೆಂಬರ್ 21ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೃಹತ್ ಶೋಭಾಯತ್ರೆ, ಧಾರ್ಮಿಕ ಸಭೆ ನಡೆಯಲಿದೆ. ಡಿಸೆಂಬರ್ 22ರಂದು ಭಕ್ತರು ದತ್ತಪಾದುಕೆಯ ದರ್ಶನ ಮಾಡಲಿದ್ದಾರೆ. ದತ್ತಮಾಲಾಧಾರಿಗಳಾಗಿ 50 ಸಾವಿರ ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಇನ್ನು ದತ್ತಪೀಠ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ. ಅಲ್ಲಿರುವಂತಹ ಇಸ್ಲಾಂ ಬರಹಗಳು ಹಾಗೂ ಚಿಹ್ನೆಗಳನ್ನು ತೆರವುಗೊಳಿಸಬೇಕು. ಕ್ಷೇತ್ರದಲ್ಲಿದ್ದ ಹಿಂದೂಗಳಿಗೆ ಸೇರಿದ ವಸ್ತುಗಳು ಕಾಣೆಯಾಗಿದ್ದು, ಅವುಗಳನ್ನು ಮತ್ತೆ ಪ್ರತಿಷ್ಟಾಪಿಸಬೇಕು ಎಂದು ಆಗ್ರಹಿಸಿದರು. ಇನ್ನು ದತ್ತಪೀಠದಲ್ಲಿ ಅರ್ಚಕರನ್ನು ನೇಮಕ ಮಾಡಬೇಕು ಹಾಗೂ ನಿರಂತರ ಪೂಜೆಗಳು ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.