ಉಡುಪಿ, ಡಿ 10(SM): ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಗಣಿ ಅಧಿಕಾರಿಗಳು ಮರಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಂಡುರುವ ಘಟನೆ ಉಡುಪಿಯ ಮೂಡುಬೆಳ್ಳೆ ಕಪ್ಪಂದ್ದ ಕರಿಯ ಎಂಬಲ್ಲಿ ನಡೆದಿದೆ.
ಮೂಡುಬೆಳ್ಳೆ ಕಪ್ಪಂದ್ದ ಕರಿಯ ನದಿಯಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿತ್ತು. ಈ ಬಗ್ಗೆ ಅಲ್ಲಿನ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು, ಪೊಲೀಸರು ಗಣಿ ಇಲಾಖೆಗೆ ಸೂಚಿಸಿದ್ದರು. ಅವರ ಮಾಹಿತಿಯಂತೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಸುಮಾರು 20 ಯೂನಿಟ್ ಮರಳು ಸಂಗ್ರಹ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಮರಳುಗಾರಿಕೆಗೆ ಬಳಸಿದ್ದ ವಾಹನಗಳನ್ನೂ ಕೂಡ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಶಿರ್ವ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.