ನವದೆಹಲಿ ಡಿ, 11(MSP): ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸ್ವರ್ಧಿಸಿರುವ 8,500 ಕ್ಕೂ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇನ್ನೊಂದೆಡೆ ಮೋದಿ ವರ್ಸಸ್ ಮಹಾ ಘಟ್ ಬಂಧನ್ ನಡುವಿನ ಬಿಗ್ ಫೈಟ್ ಎಂದೇ ಬಣ್ಣಿಸಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಈಗಾಗಲೇ ಆರಂಭವಾಗಿದೆ.
2019 ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಈ 5 ರಾಜ್ಯಗಳ ಫಲಿತಾಂಶಸ್ವನ್ನು ಬಣ್ಣಿಸಲಾಗಿದೆ, ಹೀಗಾಗಿ ಇಂದು ಹೊರಬೀಳುವ ಫಲಿತಾಂಶದ ಬಗ್ಗೆ ದೇಶದಾದ್ಯಂತ ಭಾರೀ ಕುತೂಹಲ ಮೂಡಿದೆ. ಕಳೆದ ವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳ ಅನ್ವಯ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಪ್ರಬಲ ಪೈಪೋಟಿ ನೀಡುತ್ತಿದೆ. ರಾಜಸ್ಥಾನದಲ್ಲಿ ಅಧಿಕಾರ ರಚಿಸುವ ಮುನ್ಸೂಚನೆಗಳು ಸಿಕ್ಕಿವೆ. ಮಧ್ಯಪ್ರದೇಶದಲ್ಲಿ ಬಿರುಸಿ ಪೈಪೋಟಿ ಏರ್ಪಟ್ಟಿದ್ದು, ಏನಾಗಲಿದೆ ಎಂಬುದನ್ನು ಇನ್ನಷ್ಟೇ ನಿರೀಕ್ಷಿಸಬೇಕು. ಛತ್ತೀಸ್ ಗಢದಲ್ಲಿ ಪೈಪೋಟಿ ನಡುವೆಯೂ ಬಿಜೆಪಿ ಗೆದ್ದು ಬರುವ ಸಾಧ್ಯತೆಗಳು ಹೆಚ್ಚಾಗಿದೆ.