ಮಂಗಳೂರು ಅ19: ದಕ್ಷಿಣ ಕನ್ನಡ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ತನುಷ್ ಕೋಟ್ಯಾನ್ ಹತ್ತೊಂಭತ್ತು ವರ್ಷ ವಯೋಮಿತಿಯ ಒಳಗಿನ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.ನವೆಂಬರ್ 9 ರಿಂದ 20 ರ ವರೆಗೆ ಮಲೇಶ್ಯಾದಲ್ಲಿ ನಡೆಯಲಿರುವ ಏಶ್ಯಾ ಕಪ್ಪ್ ಪಂದ್ಯಾಟಗಳಲ್ಲಿ ಅವರು ಭಾರತ ತಂಡಕ್ಕಾಗಿ ಆಡಲಿದ್ದಾರೆ.
ಆಫ್ ಸ್ಪಿನ್ನಿಂಗ್ ಆಲ್ರೌಂಡರ್ ಆಗಿರುವ ತನುಷ್ ರ ಹೆತ್ತವರಾದ ಕರುಣಾಕರ್ ಹಾಗೂ ಮಲ್ಲಿಕಾ ಕೋಟ್ಯಾನ್ ಮೂಲತಃ ಉಡುಪಿ ಸಮೀಪದ ಪಾಂಗಳದವರಾಗಿದ್ದಾರೆ. ಮುಂಬಯ್ ಚೆಂಬೂರಿನಲ್ಲಿ ಹುಟ್ಟಿ ಬೆಳೆದ ತನುಷ್ ಪ್ರಸ್ತುತ ಮುಂಬಯಿನಲ್ಲಿನ ರಾಮಾನಿರಾಜನ್ ಜುನ್ಜುನ್ ವಾಲ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಶಾಲಾ ದಿನಗಳಲ್ಲೇ ಕ್ರಿಕೆಟ್ ಬಗ್ಗೆ ಹೆಚ್ಚಿನ್ ಅಸಕ್ತಿ ಹೊಂದಿದ್ದ ತನುಷ್ ಪೋಷಕರ ಹಾಗೂ ಅಧ್ಯಾಪಕರ ಪ್ರೋತ್ಸಾಹದಿಂದ ಕ್ಲಬ್ ಲೆವೆಲ್ ಪಂದ್ಯಾಟಗಳಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ವಿನೂ ಮಂಕಡ್ ಅಂಡರ್ 19 ಟ್ರೋಫಿ ಪಂದ್ಯಾಟದಲ್ಲಿ ಹತ್ತು ಒವರುಗಳಲ್ಲಿ 31 ರನ್ನುಗಳಿಗೆ 6 ವಿಕೆಟುಗಳನ್ನು ಪಡೆದು ಶ್ರೇಷ್ಟ ಪ್ರದರ್ಶಣ ನೀಡಿದ್ದರು.