ತೆಲಂಗಾಣ,ಡಿ, 11(MSP): ತೆಲಂಗಾಣದಲ್ಲಿ ಕೆ.ಚಂದ್ರಶೇರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗತೊಡಗಿದೆ. ತೆಲಂಗಾಣದಲ್ಲಿ ಅಧಿಕಾರದತ್ತ ಟಿಆರ್ ಎಸ್ ಪಕ್ಷ ದಾಪುಗಾಲು ಹಾಕಿದ್ದು ಸರಳ ಬಹುಮತ ಸಿಗುವುದು ಬಹುತೇಕ ನಿಶ್ಚಳವಾಗಿದೆ.
ಕೆಸಿಆರ್ ಅವರನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದರೂ ಪ್ರಯೋಜನ ಕಾಣುತ್ತಿಲ್ಲ. ಅವಧಿಗೂ ಮುನ್ನ ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಿದ್ದ, ಮಾಜಿ ಮುಖ್ಯಮಂತ್ರಿ ಮತ್ತೆ ಮುಖ್ಯಮಂತ್ರಿ ಸ್ಥಾನ ಏರುವ ನಿರೀಕ್ಷೆ ಇದೆ.
ಈಗೀನ ಮಾಹಿತಿಯಂತೆ ತೆಲಂಗಾಣದಲ್ಲಿ 89 ಕ್ಷೇತ್ರದಲ್ಲಿ ಟಿಆರ್ ಎಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ 16 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ ಕೇವಲ 4 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ