ನವದೆಹಲಿ, ಡಿ 11(MSP): ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರು ರಾಜೀನಾಮೆ ಸಲ್ಲಿದ್ದಾರೆ. ಆರ್ಥಿಕ ತಜ್ಞರಷ್ಟೇ ಅಲ್ಲದೇ ಪ್ರಸಿದ್ದ ಅಂಕಣಕಾರರಾಗಿದ್ದ ಇವರು ಈ ವಿಚಾರವನ್ನು ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಈ ವಿಚಾರ ತಿಳಿದು ಬಂದಿದ್ದು ರಾಜೀನಾಮೆ ಕುರಿತಂತೆ ಸ್ವತಃ ಸುರ್ಜಿತ್ ಅವರೇ ಸಾಮಾಜಿಕ ಜಾಲತಾಣ ಸ್ಪಷ್ಟಪಡಿಸಿದ್ದಾರೆ. ನೀತಿ ಆಯೋಗದ ಸದಸ್ಯ ಬಿಬೇಕ್ ದೆಬ್ರಾಯ್ ಅವರ ನೇತೃತ್ವದ ಆರ್ಥಿಕ ಸಲಹಾ ಮಂಡಳಿಯಲ್ಲಿ ಪ್ರಸ್ತುತ ಆರ್ಥಿಕ ತಜ್ಞರಾದ ರಥಿನ್ ರಾಯ್, ಅಶಿಮಾ ಗೋಯಲ್ ಹಾಗೂ ಶಮಿಕಾ ರವಿ ಸದಸ್ಯರಾಗಿದ್ದಾರೆ.