ಮಧ್ಯಪ್ರದೇಶ,ಡಿ 11(MSP): ಮಧ್ಯಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ಸಂಖ್ಯೆ 116 . ಆದರೆ ಈ ಸ್ಥಾನಕ್ಕೆ ಏರಲು , ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಮುಂದುವರಿದಿದೆ. ಕಳೆದ ಬಾರಿ ಬಿಜೆಪಿ 163 ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ ಕೇವಲ 58 ಸ್ಥಾನ ಪಡೆದಿತ್ತು.
ಮಧ್ಯಪ್ರದೇಶದಲ್ಲಿಯೂ ಆರಂಭಿಕವಾಗಿ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿತ್ತು. ನಂತರ ಕಾಂಗ್ರೆಸ್ 108 ಸ್ಥಾನಗಳಲ್ಲಿ, ಬಿಜೆಪಿ 109 ಸ್ಥಾನಗಳಲ್ಲಿ, ಬಿಎಸ್ಪಿ 5 ಹಾಗೂ ಇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ 15 ವರ್ಷದಿಂದ ಬಿಜಿಪಿ ಆಡಳಿತವಿದೆ ಈ ಪೈಕಿ ಶಿವರಾಜ್ ಸಿಂಗ್ ಚೌಹಣ್ ಅವರು 12 ವರ್ಷಗಳ ಆಡಳಿತ ನೀಡಿದ್ದರು. ಆದರೆ ಹಲವಾರು ಜನ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿಯೂ ಶಿವರಾಜ್ ಸಿಂಗ್ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎನ್ನಲಾಗಿದೆ.
ಇನ್ನು ಹಿಂದುತ್ವ ಸಂಬಂಧಪಟ್ಟಂತೆ ತಪ್ಪಿಯೂ ಮಾತುಗಳನ್ನು ಆಡದಿದ್ದ ಕಾಂಗ್ರೆಸ್ ಈ ಬಾರಿ ಪ್ರಚಾರದ ವೇಳೆ ಗೋವು, ರಾಮ, ದೇಗುಲ ವಿಚಾರಗಳನ್ನು ಪ್ರಸ್ತಾಪಿಸಿದೆ. ಪ್ರತಿ ಗ್ರಾಮದಲ್ಲಿಯೂ ಗೋ ಶಾಲೆ ಸ್ಥಾಪಿಸುವ ಮಾತುಗಳನ್ನಾಡಿದೆ ಕಾಂಗ್ರೆಸ್.