ಬೆಳಗಾವಿ,ಡಿ 11(MSP) : ಉಪ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸೋಮವಾರ ಸದನಕ್ಕೆ ಹಾಜರಾಗಿದ್ದರು.
ಪತಿ ಮುಖ್ಯಮಂತ್ರಿಯಾಗಿದ್ದ ಪತ್ನಿ ಶಾಸಕಿಯಾಗಿದ್ದು ಮತ್ತು ಸದನಕ್ಕೆ ಹಾಜರಾಗಿದ್ದು ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲು. ಈ ಹಿಂದೆ ಬಿಜೆಪಿ ಸರಕಾರದಲ್ಲಿ ಆಪರೇಷನ ಕಮಲ ಕಾರ್ಯಾಚರಣೆಗೆ ಒಳಗಾಗಿ ಮಧುಗಿರಿಯಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಗೌರಿಶಂಕರ್ ರಾಜೀನಾಮೆ ನೀಡಿದಾಗ ಉಪಚುನಾವಣೆಯಲ್ಲಿ ಗೆದ್ದು ಅನಿತಾ ಕುಮಾರಸ್ವಾಮಿ ಶಾಸಕಿಯಾಗಿದ್ದರು.
ಆದರೆ ಆಗ ಎಚ್.ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಆಗಿದ್ದರು.