ಬೆಂಗಳೂರು,ಡಿ 11(MSP): ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ನಿರ್ಣಾಯಕ ಹಂತ ತಲುಪಿದ್ದು, ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆ ಇದೆ. ಇನ್ನು ರಾಜಸ್ಥಾನದಲ್ಲಿ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತದ ಸನಿಹಕ್ಕೆ ಬರುತ್ತಿದೆ. ಬಿಜೆಪಿ ೭೪ ಕ್ಷೇತ್ರದಲ್ಲಿ ಮುನ್ನಡೆ ದಾಖಲಿಸಿದೆ. ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸಿದೆ. ಛತ್ತೀಸ್ ಗಡ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇನ್ನು ತೆಲಂಗಾಣದಲ್ಲಿ ಟಿಆರ್ ಎಸ್ ಗೆದ್ದು ಬೀಗಿದೆ.
ಬಿಜೆಪಿ ಗೆಲುವು ಸಾಧಿಸಿದಾಗಲೆಲ್ಲಾ ಇವಿಎಂ ಮತ ಯಂತ್ರವನ್ನು ಹ್ಯಾಕ್ ಮಾಡಲಾಗಿದೆ ಎಂದು ದೂರುವ ಪ್ರತಿಪಕ್ಷಗಳಿಗೆ, ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ಕೊಟ್ಟಿರುವ ಸಂಸದೆ ಶೋಭಾ ಕರಂದ್ಲಾಜೆ ”ಈಗ ಎಲ್ಲಾ ಇವಿಎಂಗಳು ಇದ್ದಕ್ಕಿದ್ದಂತೆ ಸರಿಯಾಗಿ ಕೆಲಸ ಮಾಡುತ್ತಿವೆ” ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ
ಪ್ರತಿಪಕ್ಷಗಳು ಪ್ರಕಾರ ಇದು ಪ್ರಜಾಪ್ರಭುತ್ವದ ಗೆಲವು. ಇಲ್ಲಿ ಇವಿಎಂ ಮತ ಯಂತ್ರವನ್ನು ತಿರುಚಿಲಾಗಿಲ್ಲವೇ ಎನ್ನುವುದನ್ನು ಪರೋಕ್ಷವಾಗಿ ಇಂದು ಹೇಗೆ ಎಲ್ಲಾ ಇವಿಎಂ ಮತ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವ ಧಾಟಿಯಲ್ಲಿ ಪ್ರಶ್ನಿಸಿದ್ದಾರೆ.