ಮಂಗಳೂರು ಅ19: ಲಿಂಗಾಯಿತ ಸಮುದಾಯದಲ್ಲಿಎರಡು ಸಂಸ್ಕ್ರತಿಗಳ ಹಿಂಬಾಲಕರಿದ್ದಾರೆ. ಎರಡು ಸಂಸ್ಕ್ರತಿಗಳಿದ್ದರೂ ಅವರು ಎರಡು ಸಮುದಾಯಗಳಲ್ಲ. ಇದು ಎರಡು ಸಂಸ್ಕ್ರತಿಗಳೊಂದಿಗೆ ಒಂದಾಗಿರಲು ಲಿಂಗಾಯಿತರಿಗೆ ದೊರಕಿದ ಸುವರ್ಣ ಅವಕಾಶವಾಗಿದೆ." ಎಂದು ಪೇಜಾವರ ಪರ್ಯಾಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಉಡುಪಿ ಶ್ರೀ ಕೃಶ್ಣ ಮಠದಲ್ಲಿ ನಡೆದ ಪತ್ರಿಕಾ ಗೋಶ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾನಾಡುತ್ತಿದ್ದರು
ಉಡುಪಿ ಶ್ರೀ ಕೃಶ್ಣ ಮಠದಲ್ಲಿ ನಡೆದ ಪತ್ರಿಕಾ ಗೋಶ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತಾನಾಡುತ್ತಿದ್ದರು.
ಮುಂದೆ ಮಾತಾನಾಡಿ ಅವರು " ಒಮ್ಮೆ ಹಿಂದು ಸಂಪ್ರದಾಯದ ಪ್ರಕಾರ ದೇವರನ್ನು ಆರಾಧಿಸಲು ಆರಂಭಿಸಿದರೆ ನಾವು ಹಿಂದುಗಳಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಅಲ್ಪಸಂಖ್ಯಾತ ಬ್ರಾಹ್ಮಣರನ್ನು ಬಸವಣ್ಣರ ಕಾಲದಲ್ಲಿ ಜೀವಿಸಿದ್ದ ಬ್ರಾಹ್ಮಣರು ಮಾಡಿದ ತಪ್ಪಿಗೆ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಧ್ವೆತ ಹಾಗೂ ಅಧ್ವೆತ ಎಂಬ ಎರಡು ಭೋದನೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಇವು ವೇದಕಾಲದ ಭಾಗಗಲ್ಲವೆಂದು ಹೇಳಲು ಸಾಧ್ಯವಿಲ್ಲ. ಲಿಂಗಾಯಿತ ಹಾಗೂ ವೀರಶೈವರಿಗೆ ಶಿವನೇ ಆರಾಧ್ಯ ದೇವರು. ಆದುದರಿಂದ ಇವು ಎರಡು ಪ್ರತ್ಯೇಕ ಧರ್ಮಗಳಾಗಲು ಸಾಧ್ಯವಿಲ್ಲ" ಎಂದು ವಿವರಣೆ ಕೊಟ್ಟರು