ಸುಳ್ಯ,ಡಿ 11(MSP): ರೈತರ ಸಮಸ್ಯೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದೆಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಹೇಳಿದರು.ಅವರು ಸುಳ್ಯ ಆರ್ಯುವೇದ ಕಾಲೇಜಿನಲ್ಲಿ ಕ್ಯಾಂಪ್ಕೋ ವತಿಯಿಂದ ರೈತರೊಂದಿಗೆ ನಡೆಸ ಸಂವಾದ ಕಾರ್ಯಕ್ರಮದಲ್ಲಿ ರೈತರರನ್ನು ಉದ್ದೇಶಿಸಿ ಮಾತನಾಡಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ,ಪ್ರಧಾನಿಯೊಂದಿಗೆ ಚರ್ಚಿರಿಸಿ ರೈತರ ಕೃಷಿ ಬೆಳೆಗಳ ಬಗ್ಗೆ ಬೆಂಬಲ ಬೆಲೆ ನೀಡಲು ಸಭೆ ಕರೆಯಲಾಗುವುದು.ಭವಿಷ್ಯದಲ್ಲಿ ರೈತರರಿಗೆ ಅನಾನೂಕಲ ವಾಗುವ ಯಾವುದೇ ನಿರ್ಣಾಯನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಅಂಗಾರ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾದವ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೈತರು ಬೇರೆ ಬೇರೆ ಬೆಳೆಯ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತಂದರು.