ನವದೆಹಲಿ, ಡಿ 11(SM): ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಅಂತಿಮಗೊಂಡಿದೆ. ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತೆ ಅಧಿಕಾರ ಪಡೆಯುವುದು ಖಚಿತವಾಗಿದೆ. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರಕ್ಕೆ ಏರಲಿದೆ. ಛತ್ತೀಸ್ ಗಢ ಕಾಂಗ್ರೆಸ್ ಪಾಲಾಗಿದ್ದು, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ ಸರಕಾರ ರಚನೆಗೆ ಅವಕಾಶವಿದೆ. ಆದರೆ, ಮಧ್ಯಪ್ರದೇಶ ಮಾತ್ರ ಜಿದ್ದಾಜಿದ್ದಿನ ಕಣವಾಗಿದೆ.
ರಾಜ್ಯವಾರು ಫಲಿತಾಂಶ:
ಮಧ್ಯಪ್ರದೇಶ
ಮಧ್ಯಪ್ರದೇಶದಲ್ಲಿ ಒಟ್ಟು ಸ್ಥಾನಗಳು-230. ಕಾಂಗ್ರೆಸ್-111 ಸ್ಥಾನಗಳಲ್ಲಿ ಗೆಲುವು. ಬಿಜೆಪಿ-110 ಸ್ಥಾನಗಳಲ್ಲಿ ಗೆಲುವು. ಬಿಎಸ್ಪಿ-2 ಸ್ಥಾನಗಳಲ್ಲಿ ಗೆಲುವು. ಇತರೆ-7 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಛತ್ತಿಸ್ ಗಢ:
ಛತ್ತಿಸ್ ಗಢದಲ್ಲಿ ಒಟ್ಟು ಸ್ಥಾನಗಳು 90. ಕಾಂಗ್ರೆಸ್ ಗೆಲುವು ಸಾಧಿಸಿರುವ ಸ್ಥಾನಗಳು-65, ಬಿಜೆಪಿ-16 ಸ್ಥಾನಗಳಲ್ಲಿ ಜಯ. ಬಿಎಸ್ಪಿ-4 ಸ್ಥಾನಗಳು ಹಾಗೂ ಇತರೆ 5 ಸ್ಥಾನಗಳು.
ಮಿಜೋರಾಂ:
ಮಿಜೋರಾಂನಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು-40. ಎಂಎನ್ ಎಫ್-26 ಸ್ಥಾನ, ಕಾಂಗ್ರೆಸ್-5, ಬಿಜೆಪಿ-1 ಹಾಗೂ ಇತರರು-8 ಸ್ಥಾನಗಳಲ್ಲಿ ಗೆಲುವು.
ರಾಜಸ್ಥಾನ:
ರಾಜಸ್ಥಾನದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು-199. ಕಾಂಗ್ರೆಸ್-100, ಬಿಜೆಪಿ-74, ಬಿಎಸ್ಪಿ 5 ಹಾಗೂ ಇತರರು-20 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ತೆಲಂಗಾಣ:
ತೆಲಂಗಾಣದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು-119. ಟಿಆರ್ ಎಸ್-87, ಕಾಂಗ್ರೆಸ್-22, ಬಿಜೆಪಿ 1 ಹಾಗೂ ಇತರರು-9 ಸ್ಥಾನಗಳಲ್ಲಿ ಗೆಲುವು.