ನವದೆಹಲಿ, ಡಿಸೆಂಬರ್ 11(SM): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಗವರ್ನರ್ ನೇಮಕಗೊಂಡಿದ್ದಾರೆ. ಶಕ್ತಿಕಾಂತ್ ದಾಸ್ ಅವರನ್ನು ಹೊಸ ಗವರ್ನರ್ ಆಗಿ ನೇಮಕಗೊಳಿಸಲಾಗಿದೆ.
ಊರ್ಜಿತ್ ಪಟೇಲ್ ಸ್ಥಾನ ತೊರೆದ ನಂತರ ಅಲ್ಲಿಗೆ ಯಾರ ನೇಮಕ ಆಗಬಹುದು ಎಂಬ ಬಗ್ಗೆ ಚರ್ಚೆ ಆಗುತ್ತಿತ್ತು. ಇದೇ ವೇಳೆಯಲ್ಲಿ ಶಕ್ತಿಕಾಂತ್ ದಾಸ್ ಅವರನ್ನು ಹೊಸ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
ಶಕ್ತಿಕಾಂತ್ ದಾಸ್, ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿಯಾಗಿದ್ದರು. 2015ರಿಂದ 2017ರ ಅವಧಿಯಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಬ್ಯಾಂಕ್ ಜತೆಗೆ ಕೆಲಸ ಮಾಡಿದ ಅನುಭವ ಶಕ್ತಿಕಾಂತ್ ಹೊಂದಿದ್ದಾರೆ. ಸದ್ಯಕ್ಕೆ ಭಾರತ ಹಣಕಾಸು ಆಯೋಗದ ಸದಸ್ಯರು ಕೂಡ ಇವರಾಗಿದ್ದಾರೆ.
ಜಿ20 ಸಮಾವೇಶದಲ್ಲಿ ಭಾರತ ಸರಕಾರದ ಪ್ರತಿನಿಧಿಯೂ ಕೂಡ ಶಕ್ತಿಕಾಂತ್ ಆಗಿದ್ದಾರೆ. ಶಕ್ತಿಕಾಂತ್ ಪ್ರಧಾನಿ ಮೋದಿಗೆ ಆಪ್ತರು ಎನ್ನಲಾಗಿದೆ.