ಬಂಟ್ವಾಳ, ಡಿ 11(SM): ಶಬರಿಮಲೆ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಭಕ್ತರೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಕೇರಳದ ಚೆಂಗನೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಾವಳಕಟ್ಟೆ ನಿವಾಸಿ ಪೂವಪ್ಪ ಭಂಡಾರಿ(45) ಹೃದಯಾಘಾತದಿಂದ ಮೃತಪಟ್ಟವರು.
ಕಾವಳಮೂಡೂರು ಗ್ರಾ.ಪಂ. ಸಿಬ್ಬಂದಿ ಪೂವಪ್ಪ ಭಂಡಾರಿ ಅವರು ಮಧ್ಯಾಹ್ನ ಒಬ್ಬರೇ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಂಗಳವಾರದಂದು ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನ ಮುಗಿಸಿ ಮರಳುತ್ತಿದ್ದ ಸಂದರ್ಭ ಇಂದು ಮಧ್ಯಾಹ್ನ ಚೆಂಗನೂರು ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಮನೆಯವರು ತಿಳಿಸಿದ್ದಾರೆ.
ಚೆಂಗನೂರುನಲ್ಲಿಯೇ ಪೋಸ್ಟ್ ಮಾರ್ಟಮ್ ನಡೆಸಿ ಬಳಿಕ ನಾಳೆ ಊರಿಗೆ ಮೃತದೇಹವನ್ನು ತರಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಮೃತರು ತಾಯಿ ಹಾಗೂ ತಂಗಿ ಹಾಗೂ ತಮ್ಮನನ್ನು ಅಗಲಿದ್ದಾರೆ.