ಬೆಳಗಾವಿ,ಡಿ 12(MSP): ಕರಾವಳಿಗ ಕೆ.ಪ್ರತಾಪ್ಚಂದ್ರ ಶೆಟ್ಟಿ ಅವರಿಗೆ ವಿಧಾನ ಪರಿಷತ್ನ ಸಭಾಪತಿ ಸ್ಥಾನ ಓಲಿದು ಬಂದಿದೆ. ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ 32 ವರ್ಷಗಳಿಂದ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದ ಪ್ರತಾಪ್ ಚಂದ್ರ ಅವರಿಗೆ ನೀಡುವ ಮೂಲಕ ಪಕ್ಷ ತನ್ನ ಸಾಮಾಜಿಕ ಬದ್ಧತೆಯನ್ನು ತೋರಿದೆ.
ಹಂಗಾಮಿ ಸಭಾಪತಿ ಜೆಡಿಎಸ್ನ ಮುಖಂಡ ಬಸವರಾಜ್ ಹೊರಟ್ಟಿ ಅವರಿಂದ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು. 35 ವರ್ಷಗಳಿಂದಲೂ ಅಧಿಕಾರದ ಹುದ್ದೆಗಾಗಿ ಲಾಭಿ ಮಾಡದ ಇವರನ್ನು ಈ ಭಾರಿ ಸಭಾಪತಿ ಸ್ಥಾನಕ್ಕೆ ಹೆಸರು ಪರಿಗಣಿಸುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ. ಮಂಗಳವಾರ ನಾಮಪತ್ರ ಸಲ್ಲಿಕೆಗಾಗಿ ಪಕ್ಷದ ವರಿಷ್ಠರಿಂದ ಸೂಚನೆ ಬರುವವರೆಗೂ ಸ್ವತಃ ಪ್ರತಾಪ್ಚಂದ್ರ ಶೆಟ್ಟರಿಗೆ ತಾನು ಪಕ್ಷದ ಅಧಿಕೃತ ಅಭ್ಯರ್ಥಿ ಎನ್ನುವುದೇ ತಿಳಿದಿರಲಿಲ್ಲ.
1949ರಲ್ಲಿ ಜನಿಸಿದ ಪ್ರತಾಪ್ ಸೆ.4ಕ್ಕೆ ಬರೋಬ್ಬರಿ 70 ವರ್ಷ ತುಂಬುತ್ತದೆ. 16 ವರ್ಷ ವಿಧಾನಸಭೆಯ ಸದಸ್ಯರಾಗಿ, 16 ವರ್ಷಗಳಿಂದ ವಿಧಾನಪರಿಷತ್ ಸದಸ್ಯ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರಶೆಟ್ಟಿ ಹೊರತು ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಖಚಿತವಾಗಿದೆ. ಬುಧವಾರ ಇವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.