ಮಂಗಳೂರು ಅ19: ನಗರದಲ್ಲಿ ಗಾಂಜಾ ವಿರುದ್ಧ ಸಮರಕ್ಕಿಳಿದಿರುವ ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿ ಸಹಿತ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಸರಬರಾಜು ಆಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ನಗರದ ಬಜ್ಜೋಡಿ ಚರ್ಚ್ ಬಳಿ ವಿದ್ಯಾರ್ಥಿ ಗಾಂಜಾ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ..ಈ ವೇಳೆ ಉರ್ವ ಹೊಯಿಗೆ ಬೈಲ್ ನಿವಾಸಿ ಆಲ್ವೀನ್ ಕ್ಲಿಂಟನ್ ಡಿಸೋಜ, ಬಿಕರ್ನಕಟ್ಟೆಯ ಅಜಯ್ ಸಬೆಸ್ಟಿಯನ್ ಲೋಬೊ, ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್, ಪಡೀಲ್ ನ ಆದಿತ್ಯ, ಪಡೀಲ್ ಅಳಪೆ ನಿವಾಸಿ ದೇವರಾಜ್, ಮೂಡುಶೆಡ್ಡೆ ನಿವಾಸಿ ಅಕ್ಷಯ್ ಸಾಲ್ಯಾನ್ ಹಾಗೂ ಎಂ.ಜಿ.ರೋಡ್ ನಿವಾಸಿ ಅಮೋಘ್ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ.