ನವದೆಹಲಿ,ಡಿ 12(MSP): ಮಂಗಳವಾರ ಆರಂಭವಾದಲ್ಲಿಸಂಸತ್ ನ ಚಳಿಗಾಲದ ಅಧಿವೇಶನ ಮಾಜಿ ಪ್ರಧಾನಿ ಅಟಲ್ ಬಿಹಾರಿ ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ, ಸಂಸದ ಅನಂತ್ ಕುಮಾರ್ ಸಹಿತ ನಿಧನರಾದ ಹಾಲಿ ಮತ್ತು ಮಾಜಿ ಸದಸ್ಯರಿಎ ಶೃದ್ಧಾಂಜಲಿ ಸಲ್ಲಿಸಿ ಉಭಯ ಸದನಗಳ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು.
ಆದರೆ ಆಗಲಿದ ನಾಯಕರಿಗೆ ಸಸತ್ ನಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತಾದರೂ ಆ ಪಟ್ಟಿಯಲ್ಲಿ ಮಾಜಿ ಸಂಸದ ನಟ ಅಂಬರೀಷ್ ಅವರ ಹೆಸರಿರಲಿಲ್ಲ. ಇದರಿಂದ ಅಸಮಧಾನಗೊಂಡ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು.ಪ್ರಮಾದವನ್ನು ಒಪ್ಪಿಕೊಂಡಿದ್ದ ಸ್ಪೀಕರ್ ಸುಮಿತ್ರಾ ಬುಧವಾರದ ಕಲಾಪದಲ್ಲಿ ಶೃದ್ದಾಂಜಲಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಆದರೆ ಇಂದು ಬೆಳಗ್ಗೆ ಮಾಜಿ ಕೇಂದ್ರ ರೈಲ್ವೇ ಸಚಿವ ಜಾಫರ್ ಶರೀಫ್ ಅವರಿಗೆ ಸಂತಾಪ ಸೂಚಿಸಿ ಅಂಬರೀಶ್ ಹೆಸರು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಂಬರೀಶ್ ಅವರಿಗೆ ಸಂತಾಪ ಸೂಚಿಸುವಂತೆ ಮನವಿ ಮಾಡಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಂತಾಪ ಸೂಚಿಸಲಾಗುವುದು ಎಂದು ತಿಳಿಸಿ ಮತ್ತೆ ಮುಂದಕ್ಕೆ ಹಾಕಿದ್ದಾರೆ.