ಮಂಗಳೂರು,ಡಿ 12(MSP): ಹೊಸ ವರ್ಷಾಚರಣೆಯ ಹೆಸರಿನಲ್ಲಿ ಡಿ.31 ರಂದು ನಡೆಯುವ ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯ ಪಾರ್ಟಿ ಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ವಿಶ್ವಹಿಂದೂ ಪರಿಷದ್ ಬಜರಂಗದಳ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಹಲವು ಹೋಟೇಲ್ ಪಬ್ ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾರ್ಟಿ ಆಯೋಜಿಸುತ್ತಿರುವುದು ಗಮನಕ್ಕೆ ಬಂದಿದೆ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಮತ್ತು ಹೋಟೇಲ್ ಗಳನ್ನು ರಾತ್ರಿ 11ರೊಳಗೆ ಮುಚ್ಚಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ
ಹಿಂದೂ ಸಂಘಟನೆಗಳ ಈ ಆಗ್ರಹ ನ್ಯೂ ಇಯರ್ ಪಾರ್ಟಿಗಳ ಮೂಲಕ ಭರ್ಜರಿ ಕಲೆಕ್ಷನ್ ಎದುರು ನೋಡುತ್ತಿದ್ದ ಹೊಟೇಲ್, ಪಬ್ಗಳ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.