ಬಜ್ಪೆ,ಡಿ 12(MSP): ಮನೆಯಲ್ಲಿ ಕಡುಬಡತನವಿದ್ದರೂ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದ ಪೋರ್ಕೋಡಿಯ ಶೋಭಿತ್ ರಾಜ್ ಅವರನ್ನು ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡ ಬೇಟಿಯಾಗಿ ಗೌರವಿಸಿತು. ಅಲ್ಲದೆ ಅವರ ಮನೆಯ ಕಷ್ಟವನ್ನು ಕಂಡು ಮತ್ತು ಅವರ ಪ್ರತಿಭೆಯನ್ನು ಗಮನಿಸಿ, ಅವರಿಗೆ ಸಹಯಹಸ್ತ ನೀಡಲು ಮುಂದಾಗಿದೆ.
ಶೋಭಿತ್ ರಾಜ್ ಪೂಜಾರಿ ಬಡತನವನ್ನೆದುರಿಸಿ ನಿಂತು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗೈದು ಹಲವು ಪ್ರಶಸ್ತಿಗಳನ್ನೂ ಗೆದ್ದ ಹೆಮ್ಮೆಯ ತುಳುನಾಡಿನ ಪ್ರತಿಭೆ.
ಮಂಗಳೂರಿನ ಕೇಂಜಾರು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ನಗರ ಪೋರ್ಕೋಡಿಯ ಊರಿನವರಾದ ಶೋಭಿತ್ ರಾಜ್'ರವರು ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ದಾಖಲೆಗಳ ಜೊತೆಗೆ ಸಾಧನೆ ಮಾಡಿದ್ದಾರೆ.ದಂಪತಿಗಳಾದ ಗೋಪಾಲಕೃಷ್ಣರವರು ದಿನಕೂಲಿ ಮತ್ತು ತಾಯಿ ಯಶವಂತಿ ಪೂಜಾರ್ತಿಯವರು ಬೀಜ ಕಂಪೆನಿಯಲ್ಲಿ ಕೆಲಸ ಮಾಡಿ ಬಡತನವಿದ್ದರೂ ಕಷ್ಟದ ಜೀವನದೊಂದಿಗೆ ತನ್ನ ಮಗನಾದ ಶೋಭಿತ್'ನ ಪ್ರತಿಯೊಂದು ಹೆಜ್ಜೆಯಲ್ಲಿ ಜೊತೆಗೂಡಿ ಸಾಧನೆಗೆ ಸಾಥ್ ನೀಡಿದ್ದಾರೆ.
ಶೋಭಿತ್'ರವರು ಅಥ್ಲೆಟಿಕ್ ನಲ್ಲಿ ಹೋಬಳಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಇವರು ಹೋಬಳಿ ಮಟ್ಟದಲ್ಲಿ 2 ಚಿನ್ನ , 2 ಕಂಚು ತಾಲೂಕು ಮಟ್ಟದಲ್ಲಿ 1 ಚಿನ್ನ ,2 ಬೆಳ್ಳಿ ಹಾಗೂ ಜಿಲ್ಲಾಮಟ್ಟದಲ್ಲಿ 3 ಕಂಚಿನ ಪದಕಗಳನ್ನೂ ಪಡೆದುಕೊಂಡಿದ್ದಾರೆ. ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕ, ರಾಷ್ಟಮಟ್ಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಹಾಕಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಕೊಡಗಿನಲ್ಲಿ ನಡೆದ ವಿಭಾಗ ಮಟ್ಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಹಾಗೂ ಹಾಸನದಲ್ಲಿ ನಡೆದ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದ್ದಾರೆ.
ಬಿರುವೆರ್ ಕುಡ್ಲ ಬಜ್ಪೆ ಘಟಕದ ಸ್ಪಂದನ ತಂಡ ಶೋಭಿತ್ ರಾಜ್ ಮತ್ತು ಅವರ ದೈಹಿಕ ಶಿಕ್ಷಕರು ಶಿವಣ್ಣ ಎಂ.ಎನ್ ಹಾಗೂ ಅವರ ಹೆತ್ತವರನ್ನು ಬಿರುವೆರ್ ಕುಡ್ಲ ಬಜಪೆ ಘಟಕದ ಕಾರ್ಯಲಯಕ್ಕೆ ಕರೆಸಿ ಸನ್ಮಾನಿಸಿ, ಶೋಭಿತ್ ರಾಜ್ ಅವರಿಗೆ ಬಿರುವೆರ್ ಕುಡ್ಲ ಬಜಪೆ ಘಟಕದ ವತಿಯಿಂದ ಸಹಾಯ ಧನ ನೀಡಲಾಯಿತು. ಈ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರು ಶ್ರೀ ಶರತ್ ಕೋಟ್ಯಾನ್, ಉಪಾಧ್ಯಕ್ಷರು ಶ್ರೀ ಚಂದ್ರಶೇಖರ್ ಅಮೀನ್, ಪ್ರಶಾಂತ್ ಕುಮಾರ್, ಚೇತನ್ ಬಂಗೇರ, ಹೇಮಂತ್ ಪೂಜಾರಿ, ಅಮೃತೇಶ್ ಪೂಜಾರಿ, ಶಿವಾನಂದ ಪೂಜಾರಿ, ಸಂತೋಷ್ ದೇವಾಡಿಗ, ನೀಲೇಶ್ ಪೂಜಾರಿ ,ಅಭಿಲಾಷ್ ಎಸ್ ಪೂಜಾರಿ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.