ಬಂಟ್ವಾಳ, ಡಿ 13(MSP): ಬಂಟ್ವಾಳದ ಫರಂಗಿಪೇಟೆಯಲ್ಲಿ ರಸ್ತೆ ಬದಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಅಂಗಡಿಗಳನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು,ರೈಲ್ವೆ ಪೊಲೀಸ್ರು ತೆರವುಗೊಳಿಸಲು ಮುಂದಾದಾಗ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ ಘಟನೆ ಡಿ.13 ರ ಗುರುವಾರ ನಡೆದಿದೆ.
ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ವ್ಯಾಪಾರಿಗಳು ಇಲಾಖೆ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇರುವ ಪರಂಗಿಪೇಟೆಯ ರಸ್ತೆಯ ಬದಿಯಲ್ಲಿ ಮೀನು, ಕೋಳಿ, ತರಕಾರಿ ಸೇರಿದಂತೆ ಅನೇಕ ಅಂಗಡಿಗಳು ಅನೇಕ ವರ್ಷಗಳಿಂದ ಕಾರ್ಯಚರಿಸುತ್ತಿತ್ತು. ಅದರೆ ಈ ಜಾಗ ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ. ಹಾಗಾಗಿ ಬೀದಿಬದಿಯ ಅಂಗಡಿಗಳನ್ನು ತೆರವುಗೊಳಿಸಲು ಅಂಗಡಿಯ ಮಾಲೀಕರಿಗೆ ತಿಂಗಳ ಹಿಂದೆ ನೋಟೀಸ್ ನೀಡಲಾಗಿತ್ತು. ಆದರೆ ನೋಟೀಸ್ ನ್ನು ಗಣನೆಗೆ ತೆಗೆದುಕೊಳ್ಳದೆ ಅಂಗಡಿಯವರು ಇದೇ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಿದರು.
ಹೀಗಾಗಿ ಇಂದು ರೈಲ್ವೆ ಇಲಾಖೆ ಯ ಅಧಿಕಾರಿಗಳು , ರೈಲ್ವೆ ಪೋಲೀಸರ ಜೊತೆ ಇಂದು ಬೆಳಿಗ್ಗೆ ಪರಂಗಿಪೇಟೆಗೆ ಅಗಮಿಸಿ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು.
ಅದಕ್ಕೆ ವಿರೋಧ ಪಡಿಸಿದ ಅಂಗಡಿಯವರು ಮೂರು ತಿಂಗಳ ಕಾಲ ಅವಕಾಶ ನೀಡುವಂತೆ ಕೇಳಿದ್ದಾರೆ. ರೈಲ್ವೆ ಇಲಾಖೆಯ ವರು ಕೇವಲ ಒಂದು ಗಂಟೆ ಅವಕಾಶ ನೀಡುತ್ತೇವೆ , ಮತ್ತು ಅಂಗಡಿ ಗಳನ್ನು ಖಾಲಿ ಮಾಡದಿದ್ದರೆ ತೆರವುಗೊಳಿಸುವ ಎಚ್ಚರಿಕೆ ನೀಡಿದ್ದಾರೆ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ರೈಲ್ವೆ ಪೋಲೀಸ್ ರು ಬಂದೋಬಸ್ತ್ ವ್ಯವಸ್ಥೆ ಮತ್ತು ಡ್ರೋನ್ ಕ್ಯಾಮರಾ ಅಳವಡಿಸಿದ್ದಾರೆ.
ಇನ್ನು ಘಟನೆ ಬಳಿಕ ಆಗಮಿಸಿದ ಪುದು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.