ಕಾರವಾರ,ಡಿ 14 (MSP): ಇಲ್ಲಿನ ನಗರ ದೇವಗಡ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ಪ್ರಾರಂಭಿಸಿರುವ ಮುಳುಗು ತಜ್ಞರು, ಹಡಗಿನ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಇನ್ನೊಂದು ವಿಶೇಷ ಎಂದರೆ ಅವುಗಳ ಮೇಲೆ ಹವಳ ದಂಡೆಗಳು ಬೆಳೆದುಕೊಂಡಿದೆ.
ಮುರ್ಡೇಶ್ವರ ಮೂಲದ ನೇತ್ರಾಣಿ ಅಡ್ವೆಂಚರ್ಸ್ ಎಂಬ ಪ್ರವೋಸೋಧ್ಯಮ ಸಂಸ್ಥೆ ಸ್ಕೂಬಾ ಡೈವಿಂಗ್ ನಡೆಸುತ್ತಿತ್ತು. ಈ ಅಡ್ವೆಂಚರ್ ಮಾಲೀಕ ಗಣೇಶ್ ಹರಿಕಂತ್ರ ಅವರಿಗೆ ಹಡಗಿನ ಅವಶೇಷಗಳು ಕಂಡಿದೆ. ದ್ವೀಪದಿಂದ ಕೇವಲ 50 ಮೀಟರ್ ವ್ಯಾಪ್ತಿಯಲ್ಲಿ 3.50 ಮೀಟರ್ ನಿಂದ 6 ಮೀಟರ್ ವರೆಗೂ ಉದ್ದವಿರುವ ಹಡಗಿನ ಚೂರುಗಳು ಪತ್ತೆಯಾಗಿದ್ದು, ಅವುಗಳ ಮೇಲೆ ಹವಳದ ದಂಡೆಗಳು ಬೆಳೆದುಕೊಂಡಿದೆ.
ಹವಳ ಬೆಳೆದಿರುವುದನ್ನು ಗಮನಿಸಿ ಸ್ಕೂಬಾ ಡೈವಿಂಗ್ ಸದಸ್ಯರು ಅವುಗಳ ಪೋಟೋ ತೆಗೆದುಕೊಂಡಿದ್ದರು. ಆ ಚಿತ್ರಗಳನ್ನು ಪರಿಶೀಲಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಾಗರ ಜೀವ ವಿಜ್ಞಾನ ಕೇಂದ್ರದ ಅಧ್ಯಕ್ಷ ಜಗನ್ನಾಥ ರಾಥೋಡ್, ಹವಳ ಬೆಳೆದಿರುವುದನ್ನು ದೃಢಪಡಿಸಿದ್ದಾರೆ.
ಇನ್ನು ಮುಳುಗಿರುವ ಹಡಗನ್ನು ಓಶಿಯನ್ ಸರಯ’ ಎಂದು ಗುರುತಿಸಲಾಗಿದೆ. 2006ರ ಜೂನ್ನಲ್ಲಿ ಕಾರವಾರಕ್ಕೆ ಇರಾನ್ನಿಂದ ‘ಓಶಿಯನ್ ಸರಯ’ ಹೆಸರಿನ ಹಡಗು ಕಚ್ಚಾತೈಲ ತುಂಬಿಕೊಂಡು ಬಂದಿತ್ತು. ಆದ್ರೆ ಅದು ಕಲ್ಲಿಗೆ ಅಪ್ಪಳಿಸಿ ಇಬ್ಭಾಗವಾಗಿ ಮುಳುಗಿತ್ತು. ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 21 ಜನರನ್ನು ರಕ್ಷಣೆ ಮಾಡಲಾಗಿತ್ತು.