ಮಂಗಳೂರು,ಡಿ 16 (MSP): ಪೆಟಾ ವಿರೋಧದ ನಡುವೆಯೂ ಪೈವಳಿಕೆ ಬೋಳಂಗಳದಲ್ಲಿ ಬಾರುಕೋಲು ಎತ್ತದೆ ಕೋಣಗಳಿಗೆ ಹಿಂಸೆ ನೀಡದೆ ‘ಅಣ್ಣ– ತಮ್ಮ’ ಜೋಡುಕರೆ ಕಂಬಳ ಶನಿವಾರ ಯಶಸ್ವಿಯಾಗಿ ನೆರವೇರಿತು. 100ಕ್ಕೂ ಹೆಚ್ಚು ಕಂಬಳ ಕೋಣಗಳು ಪಾಲ್ಗೊಂಡಿದ್ದವು.
ಆದರೆ ಪೊಲೀಸರ ಸೂಚನೆಯನ್ನು ಮೀರಿ ಶನಿವಾರ ‘ಅಣ್ಣ– ತಮ್ಮ’ ಜೋಡುಕರೆ ಕಂಬಳ ನಡೆಸಿರುವ ಸಂಘಟಕರ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಥಮ ಬಾರಿಗೆ ನಡೆಸುತ್ತಿರುವ ಪೈವಳಿಕೆ ಕಂಬಳ ಆಯೋಜಿಸದಂತೆ ಕಂಬಳ ಸಮಿತಿಯ ಪ್ರಮುಖರಿಗೆ ಕಾಸರಗೋಡು ಎಸ್ಪಿ.ಡಾ.ಎ ಶ್ರೀನಿವಾಸ್ ಶುಕ್ರವಾರ ನೊಟೀಸ್ ನೀಡಿದ್ದರು. ಆದರೆ ಶುಕ್ರವಾರ ಸಂಜೆ ಕಂಬಳ ಆಯೋಜಕರು ಎಸ್ಪಿಯೊಂದಿಗೆ ಮಾತುಕತೆ ನಡೆಸಿ, ಆ ಬಳಿಕ ಎಸ್ಪಿ ಒಪ್ಪಿಗೆ ಸೂಚಿಸಿದ ಹಿನ್ನಲೆಯಲ್ಲಿ ಸ್ವರ್ಧೆ ಆಯೋಜಿಸದ್ದರು. ಆದರೆ ಕಾಸರಗೋಡು ಎಸ್ಪಿ ಅವರ ಸೂಚನೆಯಂತೆ ಮಂಜೇಶ್ವರ ಠಾಣೆಯಲ್ಲಿ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಕಲಿಸಿದ್ದಾರೆ. ಆದರೆ ಕಂಬಳ ಆಯೋಜಿಸುವುದರ ವಿರುದ್ದ ನಾಗರಿಕರ , ಸ್ಥಳೀಯರಿಮ್ದ ಯಾವುದೇ ದೂರು ಬಂದಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಷೇಧ ಇರುವುದರಿಂದ ಕೇರಳದಲ್ಲಿ ಕಂಬಳ ನಡೆಸಲು ಅವಕಾಶವಿಲ್ಲ. ಈ ಸಂಬಂಧ ಪ್ರಾಣಿ ದಯಾ ಸಂಘಟನೆ ಪೇಟಾ ಸಲ್ಲಿಸಿದ್ದ ದೂರನ್ನು ಆಧರಿಸಿ, ಪೈವಳಿಕೆ ಕಂಬಳ ನಡೆಸದಂತೆ ಕಾಸರಗೋಡು ಎಸ್ಪಿ ಎ.ಶ್ರೀನಿವಾಸ್ ಸಂಘಟಕರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದ್ದರು. ಅದನ್ನು ಲೆಕ್ಕಿಸದೇ ಸಂಘಟಕರು ಕಂಬಳ ನಡೆಸಿದ್ದರು.