ಮಂಗಳೂರು,ಡಿ 16 (MSP): ನಾಲ್ಕು ವರ್ಷದ ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ಕಂಕನಾಡಿ ನಿವಾಸಿ ಚಂದ್ರಶೇಖರ್ ಅಲಿಯಾಸ್ ರಾಜೇಶ್ (49) ಎಂಬಾತನಿಗೆ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ, ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ನ್ಯಾಯಾಧೀಶ ಬಿ.ಆರ್ ಪಲ್ಲವಿ ಅವರು ಶಿಕ್ಷೆಯ ಪ್ರಮಾನವನ್ನು ಪ್ರಕಟಿಸಿದರು. ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳ ಕಠಿಣ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ ೭,೫೦೦ ರೂ.ಗಳನ್ನು ಬಾಲಕಿಗೆ ಪರಿಹಾರವಾಗಿ ಪಾವತಿಸಬೇಕು ತಿಂದು ಆದೇಶಿಸಿಲಾಗಿದೆ.
2016ರ ಜುಲೈ ತಿಂಗಳಿನಲ್ಲಿ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಸೈಗೋಳಿ ಸಮೀಪ ಅಪರಾಧಿ ಚಂದ್ರಶೇಖರ್ ಬಾಡಿಗೆ ಮನೆಯಲ್ಲೇ ಕೃತ್ಯ ನಡೆದಿತ್ತು.