ಮಂಗಳೂರು ಅ 19: ಆ ಮಕ್ಕಳು ಹುಟ್ಟುತ್ತಲೆ ವಿಶೇಷ ಚೇತನರಾದವರು. ಅಂತಹಾ ಮಕ್ಕಳಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ನಾವು ಯಾರಿಗೂ ಕಮ್ಮಿಯಿಲ್ಲಿ ಅಂತಾ ಪಟಾಕಿ ಹೊಡೆದು ಖುಷಿಪಟ್ರು. ಇಂತದ್ದೊಂದು ಅರ್ಥಪೂರ್ಣ ದೀಪಾವಳಿ ನಡೆದಿದ್ದು ಮಂಗಳೂರಿನ ಬುದ್ದಿಮಾಂದ್ಯ ಸಂಸ್ಥೆಯಾದ ಸಾನಿದ್ಯದಲ್ಲಿ. ಮಂಗಳೂರಿನ ಶಕ್ತಿ ನಗರದಲ್ಲಿ ಇರೋ ಸಾನಿದ್ಯ ವಿಶೇಷ ಭಿನ್ನ ಸಾಮಾರ್ಥ್ಯದ ಮಕ್ಕಳು ವಿಶೇಷವಾಗಿ ಬೆಳಕಿನ ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಎಲ್ಲಾ ಕಡೆಗಳಲ್ಲೂ ದೀಪಗಳನ್ನ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಮಂಗಳೂರಿನ ಕದ್ರಿ ಮಂಜುನಾಥ ಫ್ರೆಂಡ್ಸ್ ತಂಡದವರು ಇಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಈ ಮಕ್ಕಳಿಗಾಗಿ ವಿಶೇಷ ದೀಪವಾಳಿಯನ್ನಾಚರಿಸುವ ಮೂಲಕ ಮಕ್ಕಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ದೀಪಾವಳಿ ಅಂದ್ರೆ ಕೇವಲ ಪಟಾಕಿ ಸಿಡಿಸಿ ಸಂಭ್ರಮಿಸೋದಲ್ಲ ಬದಲಾಗಿ ದೀಪಾವಳಿಯಲ್ಲಿ ಹಚ್ಚಿದ ದೀಪಗಳು ಎಲ್ಲೆಡೆ ಹಬ್ಬುವ ಮೂಲಕ ಕತ್ತಲು ಮೂಡಿರೋ ಜನರಲ್ಲೂ ಬೆಳಕಿನ ಆಶಾಕಿರಣ ಮೂಡಿಸಿದ್ದಾರೆ.
ಶಕ್ತಿ ನಗರದಲ್ಲಿ ಇರೋ ಈ ಸಾನಿದ್ಯ ಶಾಲೆಯಲ್ಲಿ ಇಂದು ಅದೆಷ್ಟೋ ಮಕ್ಕಳು ತಮ್ಮ ಜೀವನವನ್ನ ರೂಪಿಸುವ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ವಿಶೇಷವಾದ ಭಿನ್ನ ಸಾಮಾರ್ಥ್ಯ ಹೊಂದಿರೋ ಈ ಮಕ್ಕಳಿಗೆ ಹುಟ್ಟು ಅಂದ್ರೆನೂ ಸಾವೂ ಅಂದ್ರೆನೂ ಅನ್ನೋದೇ ಗೊತ್ತಿಲ್ಲ ಹೀಗಿರೋವಾಗ ಹಬ್ಬ ಅಂದ್ರೆನೂ ಅನ್ನೋದನ್ನ ತಿಳಿದುಕೊಳ್ಳಲು ಸಾದ್ಯವೇ . ಆದ್ರೆ ಕಳೆದ ಕೆಲವು ವರ್ಷಗಳಿಂದ ಮಕ್ಕಳ ಜತೆಗೆ ಇಲ್ಲಿನ ಯುವಕರು ಇಟ್ಟಿಕೊಂಡಿರೋ ನಿರಂತರ ಸಂಪರ್ಕ ಹಾಗೂ ಮಕ್ಕಳ ಮೇಲಿನ ಕಾಳಜಿ ಇಂದು ಹಲವು ಮಕ್ಕಳಲ್ಲಿ ತಾವು ಎಲ್ಲರಂತೆ ಇದ್ದೇವೇ ಅನ್ನೋ ಮನಭಾವನೆ ಮೂಡಿದೆ. ಹಬ್ಬಗಳು ಕೇವಲ ಸಂಭ್ರಮಿಸೋದಿಕ್ಕೆ ಅಷ್ಟೇ ಅಲ್ಲದೆ ಅದು ಸಂಬಂಧಗಳನ್ನ ಬೆಸೆಯುವ ಸಮಯಾವಕಾಶ ಅಂತ ತಿಳಿದು ಎಲ್ಲರೂ ಹಬ್ಬಗಳನ್ನ ಆಚರಿಸಿದ್ರೆ ಇಂದು ಒಡೆದು ಹೋಗಿರೋ ಅದೆಷ್ಟೋ ಕುಟುಂಬಗಳು ಕೂಡಾ ಒಂದಾಗಬಹುದು. ಆದ್ರೆ ಫಲಾಪೇಕ್ಷೆ ಇಲ್ಲದೆ ಮಂಜುನಾಥ್ ಫ್ರೆಂಡ್ಸ್ ಸರ್ಕಲ್ ಯುವಕರ ತಂಡ ಮಾಡ್ತಾ ಇರೋ ಈ ಹಬ್ಬದ ಆಚರಣೆ ಕತ್ತಲಿನಿಂದ ಮಕ್ಕಳನ್ನ ಬೆಳಕಿನೆಡೆಗೆ ಸಾಗುವಂತೆ ಮಾಡಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಭಾಗವಹಿಸಿದ್ರು. ಈ ವಿಶೇಷ ಸಾಮರ್ಥ್ಯದ ಮಕ್ಕಳ ಜೊತೆ ಬೆರೆತು ದೀಪಾವಳಿ ಹಬ್ಬವನ್ನು ಆಚರಿಸಿದ್ರು. ಮಕ್ಕಳಿಗೆ ತಾವೇನು ಮಾಡ್ತಾ ಇದ್ದೇವೆ ಅನ್ನೋದು ಗೊತ್ತಾಗೋದಿಲ್ಲ ಅನ್ನೋ ಕಾರಣಕ್ಕೆ ಯುವಕರ ನೇತೃತ್ವದಲ್ಲೇ ಮಕ್ಕಳಿಗೆ ಬೆಳಕಿನ ಹಬ್ಬದ ಸವಿಯನ್ನ ತೋರಿಸಿದ್ದಾರೆ. ಯುವಕರ ತಂಡ ತಾವು ತಂದಿರೋ ಸಿಡಿಮದ್ದುಗಳನ್ನ ತಾವೇ ಸುಟ್ಟು ಹಾಕಿದ್ರೆ ಕೇವಲ ಬೆಳಕು ನೀಡೋ ಆಕಾಶ ಬುಟ್ಟಿ ,ನೆಲಚಕ್ರ, ಫ್ಲವರ್ ಪಾಟ್ ಮಾತ್ರ ಮಕ್ಕಳ ಕೈ ನೀಡಿದ್ದಾರೆ. ಸ್ವರ್ಗಕ್ಕೆ ಮೂರೇ ಗೇಣು ಅನ್ನೋವಂತೆ ಮಕ್ಕಳೂ ಈ ಸದಾವಕಾಶವನ್ನ ಚೆನ್ನಾಗಿ ಬಳಸಿಕೊಂಡು ಹಬ್ಬವನ್ನ ಜೋರಾಗಿಯೇ ಆಚರಿಸಿಕೊಂಡಿದ್ದಾರೆ. ಕುಣಿದಾಡಿ ಕುಪ್ಪಳಿಸಿ ಸಂತೋಷದಿಂದ ದೀಪಾವಳಿಯನ್ನು ಆಚರಿಸಿದ್ರು.
ಈ ವಿಶೇಷ ದೀಪಾವಳಿ ಹಬ್ಬದ ಆಚರಣೆಯಲ್ಲಿ ಆಹಾರ ಸಚಿವ ಯು.ಟಿ ಖಾದರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ , ಶಿರಡಿ ಸತ್ಯಸಾಯಿ ಮಂದಿರದ ಅಧ್ಯಕ್ಷ ವಿಶ್ವಾಸ್ ದಾಸ್ ಕುಮಾರ್, ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ ಕುಮಾರ್, ಟ್ರಸ್ಟ್ ಅಧ್ಯಕ್ಷ ಮಹಾಬಲ್ ಮಾರ್ಲ ಹಾಗೂ ಮಂಜುನಾಥ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಶ್ರೀಧರ್ ಸಾಲಿಯಾನ್ ಮತ್ತಿತರು ಉಪಸ್ಥಿತರಿದ್ದರು.