ದೆಹಲಿ, ಡಿ 16(SM): ಕಾಂಗ್ರೆಸ್ ಪಕ್ಷವು ನ್ಯಾಯಾಂಗವನ್ನು ಕೂಡ ತನ್ನ ಭ್ರಷ್ಟ ಹಾಗೂ ನಿರಂಕುಶ ದಾರಿಯಿಂದ ಬಿಡಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ನಾಟಕ ವಿಚಾರವನ್ನು ಪ್ರಸ್ತಾವ ಮಾಡಿದ ಅವರು, ಅಧಿಕಾರಕ್ಕೆ ಬಂದರೆ ಹತ್ತು ದಿನದೊಳಗೆ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಏನೂ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಪ್ರಯಾಗ್ ರಾಜ್ ಅನ್ನು 'ನ್ಯಾಯದ ದೇವಾಲಯ' ಎಂದು ಕರೆಯಲಾಗುತ್ತದೆ. ಆದರೆ ಈಚೆಗೆ ನ್ಯಾಯಾಂಗದ ಮೇಲೆ ರಾಜಕಾರಣದ ಒತ್ತಡವು ಬಿದ್ದು, ಬಲಿಪಶುವಾಗುತ್ತಿದೆ. ಯಾವಾಗೆಲ್ಲ ಆ ಪಕ್ಷದ ಮೇಲೆ ದಾವೆ ಹೂಡಲಾಗಿದೆಯೋ ಆಗೆಲ್ಲ ನ್ಯಾಯಾಂಗವೂ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ತೊಂದರೆ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಜನರಿಗಿಂತ ತಾನು ಮೇಲು ಎಂಬ ಕಾಂಗ್ರೆಸ್ ಧೋರಣೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧವೇ ದೋಷಾರೋಪ ಹೊರಿಸಿ, ನಿರ್ಣಯ ಕೈಗೊಳ್ಳಲು ಮುಂದಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.