ನವದೆಹಲಿ, ಡಿ 17 (MSP): 1984ರ ಸಿಖ್ ವಿರೋಧಿ ದಂಗೆಯ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ಗೆ ಜೀವವಾಧಿ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.ಪ್ರಕರಣದ ಸಂಬಂಧ ದಿಲ್ಲಿ ಅಧೀನ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿ ತೀರ್ಪನ್ನು ಪ್ರಶ್ನಿಸಿ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಮುರಳಿಧರ್ ಹಾಗೂ ವಿನೋದ್ ಗೊಯೆಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಈ ಸಂಬಂಧಪಟ್ಟಂತೆ ಡಿ.17ರ ಸೋಮವಾರ ದೆಹಲಿ ಹೈಕೋರ್ಟ್ ಸಜ್ಜನ್ ಅವರಿಗೆ ರಾಜಕೀಯ ಪ್ರೋತ್ಸಾಹ ಸಿಕ್ಕಿರುವುದಾಗಿ ಕೋರ್ಟ್ ಅಭಿಪ್ರಾಯಪಟ್ಟಿದೆ. ತೀರ್ಪಿಗೆ ಹರ್ಷ ವ್ಯಕ್ತಪಡಿಸಿರುವ ಅರ್ಜಿದಾರೆ ಚಮನ್ ಕೌರ್, ನನ್ನ ತಂದೆಯನ್ನು ಸಿಖ್ ಎನ್ನುವ ಕಾರಣಕ್ಕೆ ಜೀವಂತ ದಹಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ 1984 ನ.1ರಂದು ದಿಲ್ಲಿಯ ಕಂಟೋನ್ಮೆಂಟ್ ಬಳಿ ರಾಜ್ ನಗರದಲ್ಲಿ ಒಂದೇ ಕುಟುಂಬದ ಐವರ ಹತ್ಯೆಗೆ ಸಂಬಂಧಿಸಿದ ಪ್ರಕರಣದ ಇದಾಗಿತ್ತು. ಸಿಬಿಐ ಕೂಡ ಈ 'ಕೋಮುಗಲಭೆ ಪೂರ್ವಯೋಚಿತ' ಎಂದು ಸಜ್ಜನ್ ಕುಮಾರ್ ಖುಲಾಸೆ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.