ಕುಂದಾಪುರ,ಡಿ 18 (MSP): ಕೆಲವು ದಿನಗಳ ಹಿಂದೆ ಕುಂದಾಪುರ ಜೂನಿಯರ್ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ 17 ವರ್ಷದ, ಕಾನೂನಿನೊಂದಿಗೆ ಸಂಘರ್ಷಕ್ಕೆ ಇಳಿದ ಬಾಲಕನನ್ನು ಪೊಲೀಸರು ಸೋಮವಾರ ಉಡುಪಿ ಬಾಲ ನ್ಯಾಯಮಂಡಳಿಗೆ ಒಪ್ಪಿಸಿದ್ದಾರೆ. ಬಾಲ ಮಂಡಳಿಯ ನ್ಯಾಯಧೀಶರು ಎರಡು ದಿನಗಳ ಅವಧಿಗೆ ನಿಟ್ಟೂರಿನ ಬಾಲಪರಿವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ.
ಅನೂಪ್ ಶೇರಿಗಾರ್
ಹಳೆ ವಿದ್ಯಾರ್ಥಿಯಾಗಿದ್ದ ಈತ , ಆತನ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹನುಮನಾಳದಲ್ಲಿ ಪೊಲೀಸರು ಸೋಮವಾರ ಪತ್ತೆ ಹಚ್ಚಿ ಕುಂದಾಪುರಕ್ಕೆ ಕರೆತಂದಿದ್ದಾರೆ. ಪ್ರೇಮ ಪ್ರಕರಣ ಕೃತ್ಯಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ನ.29 ರಂದು ಬೋರ್ಡ್ ಹೈಸ್ಕೂಲ್ ನ ಅನೂಪ್ ಶೇರಿಗಾರ್ (17) ಎಂಬ ಬಾಲಕನ ಹೊಟ್ಟೆ, ಎದೆ, ಕುತ್ತಿಗೆ ಭುಜ ಕೆನ್ನೆಗೆ ಇರಿದುಕೊಲೆಗೆ ಯತ್ನಿಸಲಾಗಿತ್ತು ಎಂದು ಕೇಸ್ ದಾಖಲಾಗಿತ್ತು.
ತನಿಖೆ ನಡೆಸಿದ ಕುಂದಾಪುರ ಎಸ್.ಐ ಹರೀಶ್ ಆರ್ ನಾಯ್ಕ್ ನೇತೃತ್ವದ ತಂಡ ಆತನ ಹುಟ್ಟೂರಿನಿಂದ ಕುಂದಾಪುರಕ್ಕೆ ಕರೆ ತಂದಿದ್ದಾರೆ. ಆರೋಪಿ ಆತನ ಪ್ರಿಯತಮೆ ಹಾಗೂ ಗೆಳೆಯ ಚರ್ಚಿಸಿ ಇರಿಯಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಅನೂಪ್ ಗೆ ಇರಿದ ಬಾಲಕನು ಕೋಡಿಗೆ ಹೀಗಿ ತೆಗ್ಗಟ್ಟೆಗೆ ತೆರಳಿ ಕ್ಲಿನಿಕ್ ನಲಿ ಕೈಗೆ ಆಗಿದ್ದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದ. ಅಲ್ಲದೆ ಅದೇ ದಿನ ಅಲ್ಲದೆ ಸಂಜೆ ಮತ್ತಿಬ್ಬರೊಂದಿಗೆ ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದ. ಬಳಿಕ. ಡಿ 2 ರಂದು ರಾಮನಗರ, ಡಿ.3 ರಂದು ಬಾಗಲಕೋಟೆ, ಡಿ. 4 ರಂದು ಹುಟ್ಟೂರಾದ ಕೊಪ್ಪಳಕ್ಕೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.