ಮಂಗಳೂರು ಅ 20: ನಗರದ ಬಿಜೈ ಬಿಗ್ ಬಜಾರ್ ಬಳಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ 7 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರೀತಂ ಪೂಜಾರಿ, ವಿಶಾಲ್ ಕುಮಾರ್, ಗೌತಮ್ ದೇವಾಡಿಗ, ವಿನೋದ್ ರಾಜ್, ದಿವಾಕರ, ಪ್ರಣವ್ ಹಾಗೂ ಕಾರ್ತಿಕ್ ಬಂಧಿತ ಆರೋಪಿಗಳು. ಬಂಧಿತರಿಂದ ಮಾರಕಾಸ್ತ್ರ, 3 ದ್ವಿಚಕ್ರ ವಾಹನಗಳು ಹಾಗೂ 6 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವಿಚಾರಣಾಧೀನ ಕೈದಿ ಆಕಾಶಭವನ ಶರಣ್ ನ ಸಹಚರರಾಗಿದ್ದು, ಆತನ ಸೂಚನೆ ಮೇರೆಗೆ ದರೋಡೆ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಆರೋಪಿಗಳನ್ನು ಉರ್ವಾ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ವಿಚಾರಣೆ ಮುಂದುವರಿದಿದೆ.